Advertisement

Health ಗ್ರಾಮೀಣ ಭಾಗದ ಜನರಲ್ಲಿ ಬಿಪಿ, ಶುಗರ್‌ ಹೆಚ್ಚಳ

02:50 AM Sep 16, 2023 | Team Udayavani |
ಮಂಗಳೂರು: ಕೋವಿಡ್‌ ಬಳಿಕ ಜನರಲ್ಲಿ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡುವ ಮಹತ್ವದ ಉದ್ದೇಶ ದೊಂದಿಗೆ ಆರಂಭ ಮಾಡಿರುವ ಗ್ರಾಮ ಆರೋಗ್ಯ ಯೋಜನೆ ರಾಜ್ಯಾದ್ಯಂತ ಚಾಲನೆಯಲ್ಲಿದ್ದು, ಜನರಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಈ ಯೋಜನೆಯು ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೆಎಚ್‌ಪಿಟಿ (ಕರ್ನಾಟಕ ಹೆಲ್ತ್‌ ಪ್ರಮೋಶನ್‌ ಟ್ರಸ್ಟ್‌)ಯ ತಾಂತ್ರಿಕ ಬೆಂಬಲದೊಂದಿಗೆ ಪ್ರತೀ ಗ್ರಾಮ ಪಂಚಾಯತ್‌ನಲ್ಲೂ ಅನುಷ್ಠಾನಗೊಳ್ಳುತ್ತಿದೆ.

ಪ್ರತೀ ಗ್ರಾ.ಪಂ.ಗೆ 30 ಸಾವಿರ ರೂ. ಅಂದಾಜು ವೆಚ್ಚದಲ್ಲಿ ಇಲಾಖೆಯಿಂದ ಆರೋಗ್ಯ ಕಿಟ್‌ ನೀಡಲಾಗಿದೆ. ಈ ಕಿಟ್‌ ಬಳಸಿಕೊಂಡು ಆರೋಗ್ಯ ತಪಾಸಣ ಶಿಬಿರ ಆಯೋಜಿಸಲಾಗುತ್ತಿದೆ. ಗ್ರಾಮೀಣ ಜನರಲ್ಲಿರುವ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಿ ಅವರನ್ನು ಆರೋಗ್ಯವಂತರಾಗಿರಿಸುವುದು ಈ ಕಾರ್ಯಕ್ರಮದ ಉದ್ದೇಶ. ಜನರ ಆರೋಗ್ಯ ಕುರಿತಾದ ಅಂಕಿಅಂಶಗಳು ಇಲ್ಲಿ ದಾಖಲಾಗುತ್ತವೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಸುರಕ್ಷತ ಅಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ, ಆಶಾ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಶಿಬಿರಕ್ಕೆ ಸಹಯೋಗ ನೀಡುತ್ತಾರೆ. ಯಾವುದೇ ರೋಗ ಲಕ್ಷಣಗಳಿದ್ದರೆ ಅಂತಹವರನ್ನು ಹೆಚ್ಚಿನ ತಪಾಸಣೆ, ಆರೋಗ್ಯ ಸೇವೆಗಳಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
ಒಂದೇ ಮನೆಯಲ್ಲಿ ಐದು ಕ್ಷಯ
ಇದು ವರೆಗೆ ಪತ್ತೆಯಾಗದೆ ಉಳಿದಿದ್ದ ಪ್ರಕರಣವಿದು. ಸುಳ್ಯ ತಾಲೂಕಿನ ಒಂದೇ ಮನೆಯಲ್ಲಿ ಐವರಿಗೆ ಕ್ಷಯರೋಗ ಸೋಂಕು ತಗಲಿರುವುದು ಅಭಿಯಾನದ ವೇಳೆ ಪತ್ತೆಯಾಗಿದೆ. ಕ್ಷಯ ಪ್ರಕರಣ ಸುಳ್ಯ ಭಾಗದಲ್ಲಿ ಹೆಚ್ಚು ಇದೆ. ತಂಬಾಕು ಸೇವನೆ, ಮದ್ಯಪಾನದಿಂದ ಬಂದಿರುವುದು ಪತ್ತೆಯಾಗಿದೆ.

Advertisement

ಕಿಟ್‌ನಲ್ಲಿ ಏನೇನಿದೆ?
 ಪಲ್ಸ್‌ ಆಕ್ಸಿಮೀಟರ್‌
 ಇನ್‌ಫ್ರಾ ರೆಡ್‌
ಥರ್ಮೋಮೀಟರ್‌
 ಡಿಜಿಟಲ್‌ ರಕ್ತದೊತ್ತಡ
ಮಾಪಕ
 ಗ್ಲೂಕೋ ಮೀಟರ್‌
 ಹಿಮೋಗ್ಲೋಬಿನೊ
ಮೀಟರ್‌
 ಸ್ಟೇಡಿಯೋ ಮೀಟರ್‌
 ಡಿಜಿಟಲ್‌ ತೂಕದ ಯಂತ್ರ

ಜಾಗೃತಿ 
ಶಿಬಿರದಲ್ಲಿ ಸ್ತ್ರೀಯರ ಮುಟ್ಟಿನ ಸಮಸ್ಯೆ, ಪೋಕೊÕ ಪ್ರಕರಣಗಳ ಬಗ್ಗೆ, ಮಕ್ಕಳ ವಿವಾಹದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
30ರ ಮೇಲ್ಪಟ್ಟವರಿಗೆ ಹಾಗೂ ಮಕ್ಕಳಿಗೆ
-30ರಿಂದ ಮೇಲ್ಪಟ್ಟು ಎಲ್ಲ ವಯಸ್ಕರ ತಪಾಸಣೆ
– 7ರಿಂದ 18ರ ಹರೆಯದ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ಬಗ್ಗೆ ತಪಾಸಣೆ
ಗ್ರಾಮ ಆರೋಗ್ಯ ಮೂಲಕ ಗ್ರಾಮೀಣ ಜನರ ಆರೋಗ್ಯ ತಪಾ ಸಣೆ ಮಾಡಲಾಗುತ್ತಿದೆ, ಈಗ ಅಭಿಯಾನ ರೂಪ ಪಡೆದ ಕಾರಣ ಜನರ ಆರೋಗ್ಯದ ಮೇಲೆ ನಿಗಾ ಇರಿಸುವುದು ಸಾಧ್ಯವಾಗಿದೆ.
-ಡಾ| ಆನಂದ್‌, ಜಿ.ಪಂ. ಸಿಇಒ, ದ.ಕ.
- ವೇಣುವಿನೋದ್‌ ಕೆ.ಎಸ್‌.
Advertisement

Udayavani is now on Telegram. Click here to join our channel and stay updated with the latest news.

Next