Advertisement

Khalistanis: ಖಲಿಸ್ಥಾನಿಗಳ ನಿಗ್ರಹಕ್ಕೆ ನೆರವು ಹೆಚ್ಚಳ

11:59 PM Aug 11, 2023 | Team Udayavani |

ಹೊಸದಿಲ್ಲಿ: ಬ್ರಿಟನ್‌ನಲ್ಲಿ ಖಲಿಸ್ಥಾನಿ ಪರ ಉಗ್ರರ ದಮನಕ್ಕಾಗಿ ಒಂದು ಹೆಚ್ಚುವರಿ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬ್ರಿಟನ್‌ ರಕ್ಷಣ ಸಚಿವ ಟಾಮ್‌ ಟಗೆಂಡಟ್‌ ತಿಳಿಸಿದ್ದಾರೆ.

Advertisement

ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಟಾಮ್‌ ಅವರು ಶುಕ್ರವಾರ ಈ ಘೋಷಣೆಯನ್ನು ಮಾಡಿದ್ದಾರೆ. ಬ್ರಿಟನ್‌ನಲ್ಲಿ ಖಲಿಸ್ಥಾನಿ ಪರ ಉಗ್ರ ಚಟುವಟಿಕೆಗಳು ತೀವ್ರಗೊಂಡಿವೆ. ಮಾರ್ಚ್‌ನಲ್ಲಿ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಗೆ ಖಲಿಸ್ಥಾನಿ ಪರ ಬೆಂಬಲಿಗರು ನುಗ್ಗಿ, ದಾಳಿ ನಡೆಸಿದ್ದರು. ಇದರ ವಿರುದ್ಧ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿತ್ತು. ಹೊಸದಿಲ್ಲಿಯಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರೊಂದಿಗೆ ಮಾತುಕತೆ ನಡೆಸಿದ ಟಾಮ್‌, “ಬ್ರಿಟನ್‌ನಲ್ಲಿ ಖಲಿಸ್ಥಾನಿ ಪರ ಉಗ್ರವಾದವನ್ನು ಹತ್ತಿಕ್ಕಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next