Advertisement
ಈ ವರ್ಷದಲ್ಲಿ ತುಂಬಾ ಹವಾಮಾನ ವೈಪರೀತ್ಯ ಇದ್ದರೂ ಈಗ ಚಳಿಗಾಲದ ಹೊಸ್ತಿಲಲ್ಲಿ ನಿಂತಿದ್ದೇವೆ. ಶೀತ ಋತುವಿನಲ್ಲಿ ಆದಷ್ಟು ಜಾಗರೂಕತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಋತುವಿನಲ್ಲಿ ಶೀತ, ಕೆಮ್ಮು, ಜ್ವರ, ಗಂಟಲು ನೋವು ಹಾಗೂ ಚರ್ಮದ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. Prevention is better than cureಎಂಬ ಮಾತಿನಂತೆ ಎಲ್ಲರೂತಮ್ಮ ಆರೋಗ್ಯದ ಕಡೆ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮುಖ್ಯವಾಗಿ ಮಕ್ಕಳ ಬಗ್ಗೆ ನಿಗಾ ವಹಿಸಬೇಕು.
ಚಳಿಗಾಲ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಇವುಗಳಲ್ಲಿ ಜ್ವರ, ಶೀತ, ಕೆಮ್ಮು, ನೆಗಡಿ, ಕಫ ಪ್ರಮುಖವಾದವುಗಳಾಗಿವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಪದೇಪದೆ ಈ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ಹೀಗಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ತುಂಬಾ ಮುಖ್ಯ. ಹಿತಕರ ಆಹಾರ ಸೇವನೆಯಿಂದ ಮಾತ್ರ ಇದು ಸಾಧ್ಯ.
Related Articles
Advertisement
ಸರಳ ಮನೆಮದ್ದುಗಳುಇನ್ನು ಚಳಿಗಾಲದಲ್ಲಿ ಮಕ್ಕಳನ್ನು ಶೀತ, ಕೆಮ್ಮು, ನೆಗಡಿ, ಗಂಟಲು ನೋವುಗಳಂಥ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಬಾಧಿಸುವುದು ಅಧಿಕ. ಇವುಗಳಿಗೆ ಸರಳ ಮನೆಮದ್ದುಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.
-ತುಂಬಾ ಚಿಕ್ಕ ಮಕ್ಕಳಿಗೆ ದೊಡªಪತ್ರೆ ಎಲೆ (ಸಾಂಬಾರ ಬಳ್ಳಿ ಎಲೆ) ಅಥವಾ ವೀಳ್ಯದೆಲೆಯನ್ನು ಚೆನ್ನಾಗಿ ತೊಳೆದು, ಕಾದ ಕಾವಲಿ ಮೇಲೆ ಇಟ್ಟು ಬಿಸಿ ಮಾಡಿ ಎಲೆಗಳನ್ನು ಜಜ್ಜಿ ರಸ ತೆಗೆದು ಶುದ್ಧವಾದ ಜೇನುತುಪ್ಪದೊಂದಿಗೆ ನೀಡಬೇಕು.
-ಮನೆಯಲ್ಲಿ ಸುತ್ತು ಔಷಧ ಬಳಸುತ್ತಿದ್ದರೆ ತುಂಬಾ ಒಳ್ಳೆಯದು. ಇದರಿಂದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.
-ಹಿರಣ್ಯ ಪ್ರಾಶವನ್ನು ತಪ್ಪದೆ ಕೊಟ್ಟಲ್ಲಿ ಪದೇಪದೆ ಕಾಣಿಸಿಕೊಳ್ಳುವ ಶೀತ, ಕೆಮ್ಮು, ನೆಗಡಿ, ಜ್ವರ ಇತ್ಯಾದಿಗಳಿಂದ ಮಕ್ಕಳನ್ನು ದೂರವಿಡಲು ಸಾಧ್ಯವಾಗುತ್ತದೆ.
-ಬೆಳಗಿನ ಜಾವದಲ್ಲಿ ಸೀನು ಬರುವುದು ಹಾಗೂ ಮೂಗು ಕಟ್ಟುತ್ತಿದ್ದರೆ ಬಿಸಿ ಹಾಲಿಗೆ ಚಿಟಿಕೆ ಅರಶಿನ ಹಾಕಿ ಕೊಡಬಹುದು.
-4-5 ತುಳಸಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಕೊಡಬೇಕು.
-ಈ ಋತುವಿನಲ್ಲಿ ಸಿಗುವ ನೆಲ್ಲಿಕಾಯಿಯನ್ನು ಎಲ್ಲ ವಯಸ್ಸಿನವರು ಯಥೇತ್ಛವಾಗಿ ಉಪಯೋಗಿಸಬಹುದು. ಇದು ಅದ್ಭುತವಾದ ರಸಾಯನ ಗುಣವನ್ನು ಹೊಂದಿದೆ.
-ಹಿಪ್ಪಲಿ, ಕಾಳುಮೆಣಸು, ಶುಂಠಿ, ಜೇಷ್ಟಮಧು ಇತ್ಯಾದಿ ಮನೆಮದ್ದುಗಳು ತುಂಬಾ ಪ್ರಯೋಜನಕಾರಿ ಆಗಿವೆ.
ಕೊರೊನಾದಂತಹ ಸಾಂಕ್ರಾಮಿಕ ರೋಗಗಳನ್ನು ಕೂಡ ಹಿತ ಮಿತ ಆಹಾರ-ವಿಹಾರ ಅನುಸರಿಸುವುದರ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿ ರೋಗ ಬರದಂತೆ ತಡೆಯಬಹುದು. ಆದರೆ ಮಕ್ಕಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ ನಿರ್ಲಕ್ಷ್ಯ ಮಾಡದೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಿ. “ಆರೋಗ್ಯವೇ ಭಾಗ್ಯ’ವಾಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. – ಡಾ| ನಿವೇದಿತಾ ಹೆಬ್ಟಾರ್ ವೈ. ಆರ್., ಮಣಿಪಾಲ