Advertisement

ಆಯುರ್ವೇದಿಕ್‌ ಔಷಧದಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ

06:43 PM Jan 03, 2021 | Team Udayavani |

ಕಡೂರು: ಆಯುಷ್‌, ಆಯುರ್ವೇದ ಔಷಧ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಾಲೂಕು ಆಯುರ್ವೇದ ವೈದ್ಯಾಧಿಕಾರಿ ಡಾ| ದೊಡ್ಡಗುಣಿ ತಿಳಿಸಿದರು.

Advertisement

ಜಿಲ್ಲಾ ಆಯುಷ್‌ ಇಲಾಖೆ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕುಪ್ಪಾಳು ಇವರ ಸಹಯೋಗದೊಂದಿಗೆ ಲಕ್ಷಿ¾àಪುರ ಗ್ರಾಮದ ಸರ್ಕಾರಿ ಹಿ.ಪ್ರಾ.ಪಾಠಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ “ಆಯುಷ್‌ ಸೇವಾ ಗ್ರಾಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್‌ ಮಾರಕ ರೋಗದಿಂದ ಅನೇಕ ಜನರು ತಮ್ಮ ಮನೆಯಲ್ಲಿನ ಮನೆಮದ್ದನ್ನು ಉಪಯೋಗಿಸಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೂಲಕ ಕೋವಿಡ್ ಬಾರದಂತೆ ನೋಡಿಕೊಂಡಿದ್ದಾರೆ. ಯಾರು ತಮ್ಮ ಆರೋಗ್ಯದ ಬಗ್ಗೆ ವೈಯಕ್ತಿಕಕಾಳಜಿ ಇಟ್ಟುಕೊಳ್ಳುವರೋ ಅಂತಹವರಿಗೆ ರೋಗಗಳು ಬರುವುದಿಲ್ಲ ಎಂದರು.

ಸರ್ಕಾರವು ಪ್ರತಿ ತಾಲೂಕಿನಲ್ಲಿ 2 ಎರಡು ಆಯುಷ್‌ ಸೇವಾ ಗ್ರಾಮಗಳೆಂದು ಗುರುತಿಸಿ ಅಲ್ಲಿನ ರೋಗಿಗಳಿಗೆ ಆಯುಷ್‌ ಔಷ ಧಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಲಕ್ಷ್ಮೀಪುರ, ಅಂತರಗಟ್ಟೆಗೆ ಸೇರಿದೆ ಎಂದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಗೀತಾ ಮಾತನಾಡಿ, ಸೇವಾ ಗ್ರಾಮಕ್ಕೆ ಆಯ್ಕೆಗೊಂಡಗ್ರಾಮದಲ್ಲಿ ಜನಸಂಖ್ಯೆ 850ಕ್ಕೂ ಹೆಚ್ಚಿಗೆ ಇದ್ದು ಅಲ್ಲಿ ಕನಿಷ್ಟ 250 ಜನ ವಯೋಸಹಜಕಾಯಿಲೆಗಳಿಂದ ಬಳಲುತ್ತಿರಬೇಕು. ಇಲಾಖೆಯು ಪ್ರತಿ 15 ದಿನಗಳಿಗೊಮ್ಮೆ 4 ತಿಂಗಳ ಕಾಲ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಉಚಿತವಾಗಿ ಔಷ ಧಗಳನ್ನು ನೀಡಲಾಗುತ್ತದೆ ಎಂದರು.

Advertisement

ಬಿಸಲೆಹಳ್ಳಿಯ ವೈದ್ಯಾಧಿಕಾರಿ ಡಾ| ಕೆ.ಎನ್‌. ಪ್ರದೀಪ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಪುರಾತನ ಆಯುಷ್‌ ಔಷಧ ಬಳಕೆಯಿಂದ ಅನೇಕ ರೋಗಗಳು ಗುಣವಾಗಲಿವೆ. ಸರ್ಕಾರ ಆಯುಷ್‌ ಇಲಾಖೆಯ ಮೂಲಕ ನಡೆಸುತ್ತಿರುವಆಯುಷ್‌ ಸೇವಾ ಗ್ರಾಮ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಕಾರ ಇರುತ್ತದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಎ.ಕೆ. ಪಾಟೀಲ್‌ ಮಕ್ಕಳಿಗೆ ಸಮಾಜ ಕಲ್ಯಾಣಇಲಾಖೆಯಿಂದ ದೊರಕುವ ಸೌಲಭ್ಯಗಳನ್ನುವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಗೋವಿಂದರಾಜ್‌ ಮಾತನಾಡಿ, ಆಯುಷ್‌ ಉತ್ತಮ ಕಾರ್ಯಕ್ರಮವಾಗಿದ್ದು ಶಿಕ್ಷಣ ಇಲಾಖೆಯು ಸಹಕಾರ ನೀಡಲಿದೆ. ಔಷಧೀಯ ಗುಣಗಳುಳ್ಳ ಸಸಿಗಳನ್ನು ಶಾಲೆಯ ಆವರಣದಲ್ಲಿ ಬೆಳೆಸಲು ಸಿದ್ಧತೆ ಮಾಡಲಾಗಿದೆ ಎಂದರು.

ಡಾ| ಶ್ರೀನಿವಾಸ ನಾಯ್ಕ, ಪ್ರಭಾವತಿ, ಗೀತಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗ್ರಾಮದ ಮುಖಂಡರು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next