Advertisement

ಹರಿಯುವ ನೀರು ಇಂಗಿಸಿ ಅಂತರ್ಜಲ ವೃದ್ಧಿಸಿ

06:48 AM May 30, 2020 | Lakshmi GovindaRaj |

ತುಮಕೂರು: ಭೂಮಿಯ ಮೇಲೆ ಮಾನವನ ಅತಿಕ್ರಮಣದಿಂದ ಪರಿಸರದಲ್ಲಿ ಅಸಮತೋ ಲನ ಉಂಟಾಗಿದ್ದು, ಮಳೆಯ ನೀರು ಹರಿದು ಹೋಗುವುದನ್ನು ನಿಲ್ಲಿಸಿ ಭೂಮಿಯಲ್ಲಿ ಇಂಗಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಕೆಲಸ ಆಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಜಿಪಂ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಅಂತರ್ಜಲ ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಲ್ಲೆಯಲ್ಲಿ ಅಂತ ರ್ಜಲ ಹೆಚ್ಚಿಸುವ ಮೂಲಕ 30 ವರ್ಷಗಳ ಹಿಂದಿನ ಪರಿಸರ ಮತ್ತು ಪ್ರಕೃತಿಯನ್ನು ಉಳಿಸಿ ಮತ್ತು ಬೆಳೆಸುವ ಕಾರ್ಯವನ್ನು ಮಾಡಲಾಗು ವುದು ಎಂದರು.

1861 ಕೋಟಿ ರೂ. ಅನುದಾನ ಬಿಡುಗಡೆ: ಈ ಕಾರ್ಯವನ್ನು ದಿ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ಸಹಯೋಗದಲ್ಲಿ ನರೇಗಾ ಯೋಜನೆ ಯಡಿಯಲ್ಲಿ ಕಾರ್ಯಪ್ರವೃತ್ತರಾಗಿ ಅಂತರ್ಜಲ ವನ್ನು ಹೆಚ್ಚಿಸುವ ಕಾರ್ಯ ಮಾಡಬೇಕಾಗಿದೆ.  ಅದಕ್ಕಾಗಿ ಪ್ರಧಾನಿ ನರೇಗಾ ಯೋಜನೆಯಡಿ 1861 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಬೋರ್‌ವೆಲ್‌ ಗಳ ಮೂಲಕ ಭೂಮಿ ಯಿಂದ ಹೊರ ತೆಗೆದ ನೀರನ್ನು ಮತ್ತೆ ಅಂತರ್ಜಲ ಯೋಜನೆ ಮೂಲಕ ಮರು ಪೂರಣ  ಮಾಡುವ ಕೆಲಸ ಇದಾಗಿದೆ ಎಂದು ನುಡಿದರು.

ಎಲ್ಲಾ ಇಲಾಖೆ ಕೈ ಜೋಡಿಸಿ: ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಗ್ರಾಮೀಣಾ ಭಿವೃದ್ಧಿ ಮತ್ತು ಸಣ್ಣ ನೀರಾವರಿ ಇಲಾಖೆ ಒಂದೇ ಗುರಿಯನ್ನು ಹೊಂದಿದ್ದು, ಅಂತರ್ಜಲ ಹೆಚ್ಚಿಸುವ ಮೂಲಕ ಪ್ರಕೃತಿಯಲ್ಲಿ  ಸಮತೋಲನ ಕಾಪಾಡಲು ಎಲ್ಲಾ ಇಲಾಖೆ ಗಳು ಕೈಜೋಡಿಸಬೇಕೆಂದು ಕರೆ ನೀಡಿದರು.

ಅಂತರ್ಜಲ ಹೆಚ್ಚಿಸಿ: ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ಗಳಲ್ಲಿ ನರೇಗಾ ಯೋಜನೆಯಡಿ ಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುವ ಮೂಲಕ ನಿರುದ್ಯೋಗಿ ಗಳಿಗೆ ಕೆಲಸ ನೀಡುವು ದರ ಜೊತೆಗೆ ಭೂಮಿಯಲ್ಲಿ ನೀರಿನ ಮರು ಪೂರಣ  ಮಾಡುವ ಮೂಲಕ ಅಂತರ್ಜಲ ಹೆಚ್ಚಿಸಬೇಕಾಗಿದೆ ಎಂದು ಸಲಹೆ ನೀಡಿದರು.

Advertisement

ನೀರಿನ ಸಂಗ್ರಹಕ್ಕೆ ಮುಂದಾಗಿ: ಸಂಸದ ಜಿ. ಎಸ್‌. ಬಸವರಾಜು ಮಾತನಾಡಿ, ಕೇಂದ್ರ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀ ಣಾಭಿವೃದ್ಧಿ ಉದ್ಯೋಗ ಖಾತ್ರಿ ಯೋಜನೆ ಯಡಿಯಲ್ಲಿ ಉತ್ತಮ ಕಾರ್ಯ ಕೈಗೊಳ್ಳಲು ವಿಫ‌ುಲ  ಅವಕಾಶ ನೀಡಿದ್ದು, ಹಳ್ಳಿಗಾಡಿನ ನಿರುದ್ಯೋಗಿಗಳು ಇದರ ಪ್ರಯೋಜನ ಪಡೆವ ಮೂಲಕ ಮುಚ್ಚಿಹೋಗಿರುವ ಕೆರೆ-ಕಾಲುವೆ, ಹಳ್ಳ-ಕೊಳ್ಳಗಳಲ್ಲಿ ಮಳೆ ನೀರು ಹರಿದು ಹೋಗುವುದನ್ನು ನಿಲ್ಲಿಸಿ ಅಂತರ್ಜಲ ಕಾಪಾಡಿ ಕೊಳ್ಳುವಲ್ಲಿ  ಮುಂದಾಗಬೇಕು ಎಂದರು.

13 ಕೋಟಿ ಮಾನವ ದಿನ ಸೃಜನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಮಾತನಾಡಿ, ಭಾರತ ದೇಶದಲ್ಲಿ ರಾಜಸ್ಥಾನ ಬಿಟ್ಟರೆ ಕರ್ನಾಟಕ ಬರಪೀಡಿತ ರಾಜ್ಯವಾಗಿದ್ದು,  ಹಿಂದಿನ ಪ್ರಮಾಣ ದಷ್ಟೇ ಪ್ರಮಾಣದಲ್ಲಿ ಈಗಲೂ ಮಳೆಯು ಬರು ತ್ತಿದ್ದು, ಅನಿಯಮಿತವಾಗಿ ಸುರಿದು ಹರಿದು ಹೋಗುವುದನ್ನು ವೈಜ್ಞಾನಿಕ ವಾಗಿ ತಡೆಯುವ ಮೂಲಕ ಅಂತರ್ಜಲ ಹೆಚ್ಚಿಸುವುದರ ಜೊತೆಗೆ ಹವಾಮಾನ ವೈಪ  ರೀತ್ಯದಿಂದ ಉಂಟಾಗುವ ಪ್ರವಾಹ, ಬರ ಇವುಗಳನ್ನು ಹೋಗಲಾಡಿಸಬಹುದಾಗಿದೆ.

ಅದಕ್ಕಾಗಿ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ನರೇಗಾ ಯೋಜನೆಯಡಿಯಲ್ಲಿ 13 ಕೋಟಿ ಮಾನವ ದಿನಗಳನ್ನು ಸೃಜಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸದೊಂದಿಗೆ ಸಾರ್ವಜನಿಕ ಆಸ್ತಿ ಅಭಿ ವೃದ್ಧಿಗೆ ಕಾಯಕಲ್ಪ ಹಾಕಿಕೊಂಡಿದೆ ಎಂದರು. ಜಿಪಂ ಸಿಇಒ ಶುಭಾ ಕಲ್ಯಾಣ್‌, ಶಾಸಕ ರಾದ ಜಿ.ಬಿ. ಜ್ಯೋತಿಗಣೇಶ್‌, ಜಯರಾಂ, ಬಿ. ಸತ್ಯನಾರಾ ಯಣ, ಬಿ.ಸಿ.ನಾಗೇಶ್‌, ಡಾ. ಎಚ್‌.ಡಿ.  ರಂಗನಾಥ್‌,  ಪಂ ಅಧ್ಯಕ್ಷೆ ಲತಾ ರವಿಕುಮಾರ್‌, ಉಪಾ ಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next