Advertisement

ಅನುದಾನ ಹೆಚ್ಚಿಸಿ ತಾಪಂ ವ್ಯವಸ್ಥೆ ಬಲಗೊಳಿಸಿ

06:46 PM Jan 23, 2021 | Team Udayavani |

ಯಾದಗಿರಿ: ತಾಲೂಕು ಪಂಚಾಯಿತಿ ವ್ಯವಸ್ಥೆ ರದ್ದುಗೊಳಿಸುವ ಯೋಚನೆ ಪಂಚಾಯಿತಿ ರಾಜ್‌ ಇಲಾಖೆಯ ಒಂದು ಕೊಂಡಿ ಕಳಚುವಂತಿದೆ. ಈಗಾಗಲೇ ಪವರ್‌ ಇಲ್ಲದ ತಾಲೂಕು ಪಂಚಾಯಿತಿಗೆ ಸಮರ್ಪಕ ಗ್ರಾಮೀಣಾಭಿವೃದ್ಧಿ ದೃಷ್ಟಿಯಿಂದ ಹೆಚ್ಚಿನ ಅನುದಾನ ನೀಡುವ ಮೂಲಕ ಇನ್ನಷ್ಟು ಬಲಗೊಳಿಸಬೇಕು ಎನ್ನುವ ಒತ್ತಾಯ ಜನಪ್ರತಿಧಿಗಳಿಂದ ಕೇಳಿಬಂದಿದೆ.

Advertisement

ಕೆಳ ಹಂತದಲ್ಲಿ ಗ್ರಾಪಂ ಪ್ರಭಲವಾಗಿದೆ. ಜಿಪಂಗೆ ಸಾಕಷ್ಟು ಅಧಿ ಕಾರವಿದೆ. ಆದರೆ ತಾಲೂಕು ಪಂಚಾಯಿತಿಗೆ ಇಂತಿಷ್ಟು ಅಭಿವೃದ್ಧಿ ಯೋಜನೆಗಳನ್ನು ನಿಗದಿ ಮಾಡಿ, ಸೂಕ್ತ ಅನುದಾನ ಬಿಡುಗಡೆಗೊಳಿಸುವ ಯಾವುದೇ ವ್ಯವಸ್ಥೆಯಿಲ್ಲ ಎಂದು ತಾಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಸರ್ಕಾರ ತಾಲೂಕು ಪಂಚಾಯಿತಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ದೃಷ್ಟಿಯಿಂದ ಸೂಕ್ತ ಕಾರ್ಯ ಯೋಜನೆಗಳನ್ನು ರೂಪಿಸಿ ಗ್ರಾಪಂ ಮತ್ತು ಜಿಪಂ ಮಧ್ಯೆ ತಾಲೂಕು ಪಂಚಾಯಿತಿಯನ್ನು ಸೇತುವೆಯಂತಾಗಲು ವ್ಯವಸ್ಥೆಯನ್ನು ರೂಪಿಸಬೇಕಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ತಾಪಂ ಸದಸ್ಯರಾಗಿ ಜನರಿಗೆ ಮುಖ ತೋರಿಸಲು ಆಗದ ಪರಿಸ್ಥಿತಿಯಿದೆ ಎಂದು ಕೆಲವರು ಅಳಲು ತೋಡಿಕೊಂಡಿದ್ದಾರೆ. ಗ್ರಾಪಂ ಸದಸ್ಯರಾದರೇ ಉದ್ಯೋಗ ಖಾತರಿ ಯೋಜನೆ, ವಸತಿ ಹೀಗೆ ಮೂಲ ಸೌಕರ್ಯಗಳನ್ನಾದರೂ ಒದಗಿಸಲು ಅನುಕೂಲವಾಗುತ್ತದೆ. ತಾಪಂ ಒಬ್ಬ ಸದಸ್ಯರಿಗೆ 6-7 ಗ್ರಾಮಗಳು
ಬರುವುದರಿಂದ ಪ್ರಮುಖವಾಗಿ ಇಲ್ಲಿ ಯಾವುದೇ ಯೋಜನೆಗಳು ಇಲ್ಲದಿರುವುದು ಜನರಿಗೆ ಯಾವುದೇ ಸೌಲಭ್ಯವನ್ನು ಕಲ್ಪಿಸಲು ಆಗದ ಸ್ಥಿತಿಯಿದೆ.

ಈ ಹಿಂದೆ 30:54 ಯೋಜನೆ, ಬಿ.ಆರ್‌ .ಜಿ.ಎಫ್‌, ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನಗಳು ತಾಪಂಗೆ ಬರುತ್ತಿದ್ದು, ಈಗ ಅವೆಲ್ಲವನ್ನು ಸ್ಥಗಿತಗೊಳಿಸಿದ್ದು ಈ ವ್ಯವಸ್ಥೆಯಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸದಂತಾಗಿದೆ. ಪ್ರಸ್ತುತ 15ನೇ ಹಣಕಾಸು ಯೋಜನೆಯಡಿ ಜಿಲ್ಲೆಯ ತಾಪಂಗಳಿಗೆ 1 ಕೋಟಿ ಅಥವಾ 1.50 ಕೋಟಿ ರೂ. ಅನುದಾನ ನೀಡಲಾಗಿದೆ.

ಅಲ್ಲದೆ ಅನಿರ್ಬಂಧಿತ ಅನುದಾನದಲ್ಲಿ ಮೊದಲನೇ ಕಂತಿನ ಹಣ ಬಿಡುಗಡೆಯಾಗಿದ್ದು ಸಮರ್ಪಕ ಅನುದಾನವೂ ಇಲ್ಲ. ಅಧಿಕಾರವೂ ಇಲ್ಲ ಎನ್ನುವ ಪರಿಸ್ಥಿತಿಯಿದೆ. ಇನ್ನು ಸ್ಟಾಪ್‌ ಡ್ನೂಟಿ ಅನುದಾನವೂ ಕಳದೆರಡು ವರ್ಷಗಳಿಂದ ಸ್ಥಗಿತವಾಗಿದೆ ಎನ್ನುತ್ತಾರೆ ಸದಸ್ಯರು.

Advertisement

ಸರ್ಕಾರ ಹೀಗೆ ಸಾಲು-ಸಾಲು ಯೋಜನೆಗಳನ್ನು ತಾಪಂಗಳಿಂದ ಕಿತ್ತುಕೊಂಡಿದೆ ಹೊರತು ಅದನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಈಗಲಾದರೂ ತಾಲೂಕು ಪಂಚಾಯಿತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಬೇಕಿದೆ ಎಂದು ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ.

ತಾಲೂಕು ಪಂಚಾಯಿತಿಗಳಿಗೆ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಿ ಹೆಚ್ಚಿನ ಬಲ ತುಂಬಬೇಕು. ಈಗಾಗಲೇ ಜಿಪಂ ಮತ್ತು ಗ್ರಾಪಂಗೆ ನಿಗದಿಯಾಗಿರುವ ಕೆಲವು ಯೋಜನೆಗಳನ್ನು ತಾಪಂಗೆ ನಿಗದಿ ಮಾಡಿ ಗ್ರಾಮೀಣಾಭಿವೃದ್ಧಿಗೆ ಅನುಕೂಲವಾಗುವ ಕಾರ್ಯ ಮಾಡಬೇಕು. ಈ ಹಿಂದೆ ನೀಡುತ್ತಿದ್ದ ಬಿಆರ್‌ ಜಿಎಫ್‌, 30:54 ಯೋಜನೆ ಅನುದಾನವನ್ನು ಒದಗಿಸಬೇಕು.
ಈಶ್ವರ ನಾಯಕ,
ತಾಪಂ ಅಧ್ಯಕ್ಷ, ಗುರುಮಠಕಲ್‌

ತಾಪಂಗೆ ಅನುದಾನ ಒದಗಿಸಲು ಯಾವುದೇ ಸ್ಪಷ್ಟ ನಿರ್ದೇಶನ ಗಳಿಲ್ಲದಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಯಾವುದೇ ಕಾಮಗಾರಿ ಕೈಗೊಳ್ಳುವ
ಅವಕಾಶವಿಲ್ಲದಂತಾಗಿದೆ. ಹಾಗಾಗಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದಂತಾಗಿದೆ. ಗ್ರಾಪಂ ಪ್ರಬಲವಾಗಿದೆ. ಆದರೆ, ತಾಪಂಗೆ
ಸಮರ್ಪಕ ಅನುದಾನವೂ ಇಲ್ಲ. ಅಧಿಕಾರಿವೂ ಇಲ್ಲದಂತಾಗಿದೆ.
ಭೀಮವ್ವ ಎಂ. ಅಚ್ಚೋಲ,
ತಾಪಂ ಅಧ್ಯಕ್ಷೆ, ಯಾದಗಿರಿ

*ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next