ಹಾಸನ: ಫ್ರೊಟ್ಸ್ ತಂತ್ರಾಂಶ ಹಾಗೂ ಕುಟುಂಬ ತಂತ್ರಾಂಶ ಅಂಕಿ-ಅಂಶಗಳನ್ನು ನೋಂದಣಿ ಮಾಡುವುದನ್ನು ಚುರುಕುಗೊಳಿಸಿ ಎಂದು ಇ-ಆಡಳಿತದ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ನಡೆಸಿದ ವಿಡಿಯೊ ಸಂವಾದದ ಮೂಲಕ ಕುಟುಂಬದ ತಂತ್ರಾಂಶ ಹಾಗೂ ಫ್ರೊಟ್ಸ್ ತಂತ್ರಾಂಶದಲ್ಲಿನ ನೋಂದಣಿಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ರೈತರಿಗೆ ಅನುಕೂಲವಾಗುವಂತೆ ಕೃಷಿ ಉತ್ಪನ್ನಗಳ ಖರೀದಿಯಲ್ಲಿ, ಅತಿವೃಷ್ಟಿ, ಮತ್ತು ಅನಾವೃಷ್ಟಿಯ ಸಂದರ್ಭದಲ್ಲಿ, ಬೆಳೆ ವಿಮೆ ಪರಿಹಾರ ನೀಡಲು ಫ್ರೊಟ್ಸ್ ತಂತ್ರಾಂಶ ನೋಂದಣಿಗೆ ಸಹಕಾರಿಯಾಗಲಿದೆ. ಈಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು.
ಕುಟುಂಬ ತಂತ್ರಾಶದ ಮೂಲಕ ಈಗಾಗಲೇಮರಣ ಹೊಂದಿರುವ ವ್ಯಕ್ತಿಯನ್ನು ಪಡಿತರಚೀಟಿಯಿಂದ ರದ್ದುಗೊಳಿಸುವುದರಿಂದಉಳಿದ ಅರ್ಹ ಕುಟುಂಬದವರಿಗೆ ಪಡಿತರಸೌಲಭ್ಯವನ್ನು ಪಡೆಯಲು ಅನೂಕುಲವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರುಮಾತನಾಡಿ, ಕುಟುಂಬ ತಂತ್ರಾಂಶದಲ್ಲಿಈಗಾಗಲೇ 16 ಸಾವಿರ ನೋಂದಣಿಮಾಡಲಾಗಿದೆ. ತಾಲೂಕುವಾರು ವರ್ಗ ಮಾಡಿ ನೋಂದಣಿಯನ್ನು ವೇಗವಾಗಿಮಾಡಲಾಗುವುದು. ಫ್ರೊಟ್ಸ್ ನೋಂದಣಿಯಲ್ಲಿ18 ಸಾವಿರಕ್ಕೂ ಅಧಿಕ ನೋಂದಣಿಯನ್ನು ಮಾಡಲಾಗಿದೆ. ಪ್ರತಿ ತಾಲೂಕು ತಹಸೀಲ್ದಾರ್‌ಗಳೊಂದಿಗೆ ಸಭೆ ನಡೆಸಿ ಆದಷ್ಟು ತ್ವರಿತವಾಗಿನೋಂದಣಿ ಪೂರ್ಣಗೊಳಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಕವಿತಾರಾಜರಾಂ, ಕೃಷಿ ಇಲಾಖೆ ಜಂಟಿ ನಿರ್ದೇಶಕರವಿ ಹಾಗೂ ಆಹಾರ ಮತ್ತು ನಾಗರೀಕಸರಬರಾಜು ಇಲಾಖೆಯ ಉಪ ನಿರ್ದೇಶಕಪುಟ್ಟಸ್ವಾಮಿ, ನಗರ ಸಭೆ ಆಯುಕ್ತ ಕೃಷ್ಣ ಮೂರ್ತಿ ಇತರರಿದ್ದರು.