ಅಳ್ನಾವರ: ಕೆಲಸದ ಒತ್ತಡದ ನಡುವೆಯೂ ಜನರೊಂದಿಗೆ ಬಾಂಧವ್ಯವನ್ನು ಇಟ್ಟುಕೊಂಡು ಉತ್ತಮ ಸೇವೆ ನೀಡುವ ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ತರಬೇತಿ ಅವಧಿಯ ಡಿವೈಎಸ್ಪಿ ಶಿವಾನಂದ ಕಟಗಿ ಹೇಳಿದರು.
ಸ್ಥಳೀಯ ಠಾಣೆಯಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿದ ಇಬ್ಬರು ಹಾಗೂ ವರ್ಗಾವಣೆಯಾಗುತ್ತಿರುವ ನಾಲ್ವರು ಸಿಬ್ಬಂದಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪೊಲೀಸರು ಕುಟುಂಬದವರಿಗಿಂತ ಹೆಚ್ಚಾಗಿ ಜನರೊಂದಿಗೆ ಬೆರೆತು ಕೆಲಸ ಮಾಡುವುದೇ ಹೆಚ್ಚು. ಪ್ರಾಮಾಣಿಕವಾಗಿ ಸಲ್ಲಿಸುವ ಸೇವೆಯು ಇಲಾಖೆಯ ಗೌರವ ಹೆಚ್ಚಿಸುತ್ತದೆ ಎಂದರು.
ಪಿಎಸ್‌ಐ ಅನಿಲಕುಮಾರ ಮಾತನಾಡಿ, ಪೊಲೀಸರು ಒಂದೇ ಕುಟುಂಬದವರಂತೆ ಇದ್ದಾಗ ಮಾತ್ರ ಕಾರ್ಯ ಸುಗಮವಾಗಿ ಸಾಗಲು ಸಾಧ್ಯವಿದೆ. ಬಿಡುವಿಲ್ಲದ ಸೇವೆ ಪೊಲೀಸರದ್ದಾಗಿರುತ್ತದೆ. ಅವರ ಕೆಲಸದಲ್ಲಿ ಕುಟುಂಬದ ಸದಸ್ಯರ ಪಾತ್ರವೂ ಬಹುಮುಖ್ಯವಾಗಿರುತ್ತದೆ ಎಂದು ಹೇಳಿದರು.
ಸತ್ತಾರ ಬಾತಖಂಡೆ, ಲಿಂಗರಾಜ ಮೂಲಿಮನಿ, ತಮೀಮ ತೇರಗಾಂವ ಮಾತನಾಡಿದರು. ರಮೇಶ ಕುನ್ನೂರಕರ, ಶಫೀಕ್ ಖತೀಬ ಮತ್ತು ಸಿಬ್ಬಂದಿ ಹಾಜರಿದ್ದರು.
ಪದೋನ್ನತಿ ಹೊಂದಿದ ಸಚಿನ ಪಾಟೀಲ, ರವಿ ಕಮದೊಡ ಹಾಗೂ ಬೇರೆ ಠಾಣೆಗೆ ವರ್ಗಾವಣೆಗೊಂಡ ಎಂ.ಆರ್. ಮಂಟೂರ, ಬಿ.ಎನ್. ಅಷ್ಟಗಿ, ಎಂ.ಎನ್. ಜೋಡಗೇರಿ, ಸೋಮನ್ನ ಹುಚ್ಚನ್ನವರ ಅವರನ್ನು ಸನ್ಮಾನಿಸಲಾಯಿತು.