Advertisement

ಕೇಂದ್ರ ಸರಕಾರಿ ನೌಕರರಿಗೆ ಶೇ.2 ತುಟ್ಟಿ ಭತ್ಯೆ ಹೆಚ್ಚಳ?

03:45 AM Mar 06, 2017 | Team Udayavani |

ಹೊಸದಿಲ್ಲಿ: ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ.  50 ಲಕ್ಷ ಸಿಬ್ಬಂದಿ ಹಾಗೂ 58 ಲಕ್ಷ ಪಿಂಚಣಿದಾರರಿಗೆ ಮುಂದಿನ ತಿಂಗಳು  ಶೇ. 2ರಿಂದ 4ರಷ್ಟು ತುಟ್ಟಿ ಭತ್ಯೆ ಹೆಚ್ಚಿಸುವ ಸಾಧ್ಯತೆ ಇದ್ದು, ಮುಂದಿನ ತಿಂಗಳ ವೇತನದ ಜತೆ ಇದು ಒಳಗೊಂಡಿರಲಿದೆ. ಜನವರಿ 1ರಿಂದ ಇದು ಅನ್ವಯವಾಗಲಿದೆ. ಈ ಕುರಿತ ಅಧಿಕೃತ ಮಾಹಿತಿ ಮುಂದಿನ ತಿಂಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಕೆ.ಎನ್‌ ಕುಟ್ಟಿ, “ಪ್ರಸಕ್ತ ಸಾಲಿನಲ್ಲಿ 
ಬಳಕೆ ವಸ್ತುಗಳ ದರ ಏರಿಕೆಯನ್ನು ಗಮನಿಸಿದರೆ ಕನಿಷ್ಠ ತುಟ್ಟಿ ಭತ್ಯೆ ಏರಿಕೆಯಿಂದ ನೌಕರರಿಗೆ ಯಾವುದೇ ಅತೃಪ್ತಿಯಂತೂ ಸಿಗದು’ ಎಂದಿದ್ದಾರೆ.

2016, ಜನವರಿಯಲ್ಲಿಯೂ ಕೇಂದ್ರ ಸರಕಾರ ತನ್ನ ಸಿಬ್ಬಂದಿ ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಿತ್ತು. ಈ ವರ್ಷವೂ ಅದೇ ಪ್ರಮಾಣದಲ್ಲಿ ಹೆಚ್ಚಳ ಮಾಡಲಿದೆ ಎಂದು ಕುಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next