Advertisement
ಕಾಸರಗೋಡು: ಪ್ರವಾಸಿಗರ ಆಕರ್ಷಣೆಗಳಲ್ಲೊಂದಾದ ಹಾಗೂ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯ ಮದಲ್ಲಿ ಆರ್ಥಿಕತೆಯನ್ನು ಹೆಚ್ಚಿಸುವ ಬೋಟ್‌ಹೌಸ್ (ದೋಣಿ ಮನೆ)ಗೆ ಶಾಶ್ವತ ನೆಲೆ ಕಲ್ಪಿಸಲು ಕೋಟ್ಟಪ್ಪುರದಲ್ಲಿ ನಿರ್ಮಿಸಲು ಉದ್ದೇಶಿಸಿದ ಬೋಟ್‌ಹೌಸ್ ಟರ್ಮಿನಲ್ ಕಾಮಗಾರಿ ಇನ್ನೂ ಆರಂಭಗೊಳ್ಳದಿರುವುದುರಿಂದ ಮಹತ್ವಾ ಕಾಂಕ್ಷೆಯ ಯೋಜನೆ ಸಾಕಾರಗೊಳ್ಳಲು ವಿಳಂಬವಾಗುತ್ತಿದೆ.
Related Articles
ಹಿನ್ನೀರು ಜಲ ಸಾರಿಗೆ ಇಲಾಖೆ ಅಧಿಕಾರಿಗಳು ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದ್ದರು. ಮೂವರು ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸಿದ್ದರು. ಗುತ್ತಿಗೆ ಲಭಿ ಸದ ಎರಡನೇ ಟೆಂಡರು ಸಲ್ಲಿಸಿದ ಗುತ್ತಿಗೆದಾರ ಹೈಕೋರ್ಟ್ ಮೆಟ್ಟಲೇ ರಿರುವುದರಿಂದಾಗಿ ಯೋಜನೆ ಸಾಕಾರ ಗೊಳಿಸಲು ಅಡ್ಡಿಯಾಗಿದೆ. ಐದು ಕೋಟಿ ರೂಪಾಯಿ ನಿರ್ಮಾಣ ಯೋಜನೆ ವಹಿಸಿಕೊಳ್ಳಲು ಅವಕಾಶ ಮಾತ್ರವೇ ಇದೆ ಎಂಬ ಕಾರಣ ನೀಡಿ ಅವರ ಟೆಂಡರ್ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಹತ್ತು ಕೋಟಿ ರೂಪಾಯಿಯ ಟೆಂಡರ್‌ಗೆ ಅವಕಾಶವಿದೆ ಎಂದು ಬೊಟ್ಟು ಮಾಡಿ ಈ ಗುತ್ತಿಗೆದಾರ ಹೈಕೋರ್ಟ್ ಮೆಟ್ಟಲೇರಿದ್ದಾರೆ. ನ್ಯಾಯಾಲಯದಲ್ಲಿ ಕೇಸು ಹಾಗೂ ತರ್ಕಗಳಿಂದಾಗಿ ಯೋಜನೆ ಅನಿಶ್ಚಿತತೆಗೆ ತಳ್ಳಲ್ಪಟ್ಟಿದೆ.
Advertisement
ಪ್ರತಿಭಟನಾರ್ಹಪ್ರವಾಸೋದ್ಯಮ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಕೋಟ್ಟಪ್ಪುರಂ ಹೌಸ್ ಬೋಟ್ ಟರ್ಮಿನಲ್ ಸಾಕಾರಗೊಂಡರೂ ಪ್ರಸ್ತುತವಿರುವ ಬೋಟ್‌ಹೌಸ್‌ಗಳನ್ನು ಏಕ ಕಾಲದಲ್ಲಿ ನಿಲುಗಡೆಗೊಳಿಸಲು ಕೋಟ್ಟಪ್ಪುರದಲ್ಲಿ ಸ್ಥಳಾವಕಾಶ ಹಾಗೂ ಸೌಕರ್ಯವಿಲ್ಲ. ಲಂಗರು ಹಾಕಲು ಟರ್ಮಿನಲ್ ಪ್ರಯೋಜನವಾದರೂ ಎಲ್ಲ ಬೋಟ್‌ಹೌಸ್‌ಗಳು ಇದರ ಪ್ರಯೋಜನ ಪಡೆಯಲು ಸಾಧ್ಯವಾಗದು. ಟರ್ಮಿನಲ್ ಬದಲಾಗಿ ಬೋಟ್‌ಹೌಸ್‌ಗಳ ದುರಸ್ತಿ ಕಾರ್ಯ ನಡೆಸಲು ಯಾರ್ಡ್‌ಗಳನ್ನು ಸ್ಥಾಪಿಸಿದರೆ ಪ್ರಯೋಜನವಾಗಲಿದೆ. ಟರ್ಮಿನಲ್ ನಿರ್ಮಾಣ ವಿಳಂಬವಾಗುತ್ತಿದ್ದರೂ, ಜನಪ್ರತಿನಿಧಿಗಳು ಮಧ್ಯಸ್ಥಿಕೆ ವಹಿಸಿ ಟರ್ಮಿನಲ್ ಶೀಘ್ರ ಸಾಕಾರಗೊಳ್ಳುವಂತೆ ಮಾಡದಿರುವುದು ಪ್ರತಿಭಟನಾರ್ಹ.
– ಪಿ.ಪಿ. ಪವಿತ್ರನ್ ಕಾರಿಯಿಲ್, “ಸ್ನೇಹ ತೀರಂ’ ಹೌಸ್ ಬೋಟ್ ಮಾಲಕ