Advertisement

ಉಡುಪಿ, ಕಾರ್ಕಳದ ಉದ್ಯಮಿಗಳ ಮನೆ, ಕಚೇರಿ ಮೇಲೆ ಐಟಿ ದಾಳಿ

10:26 AM Jan 23, 2019 | Sharanya Alva |

ಉಡುಪಿ: ಜಿಲ್ಲೆಯ ಕಾರ್ಕಳದ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿರುವ ಘಟನೆ ನಡೆದಿದೆ.

Advertisement

ಕಾರ್ಕಳದ ಸ್ಥಳೀಯ ರಾಜಕಾರಣಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮತ್ತು ಕ್ರಷರ್ ಮಾಲೀಕ ಜಾಯ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉಡುಪಿ, ಕಾರ್ಕಳ ಕಚೇರಿಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.

ಉದಯ್ ಕುಮಾರ್ ಶೆಟ್ಟಿ ಅವರ ಮುನಿಯಾಲು ನಿವಾಸದಲ್ಲಿರುವ ದಾಖಲೆಗಳು, ಗೇರು ಬೀಜ ಕಾರ್ಖಾನೆ,  ಕೋಟದಲ್ಲಿರುವ ಫಿಶ್ ಮಿಲ್ ಹಾಗೂ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

ಇನ್ನೂ ಕೆಲವು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next