Advertisement

ರಿಟರ್ನ್ಸ್ ಸಲ್ಲಿಕೆ; ತಪ್ಪು ಮಾಹಿತಿ ಕೊಟ್ಟರೆ ಕ್ರಮ

06:00 AM Apr 19, 2018 | |

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ನಲ್ಲಿ ತಪ್ಪು ಮಾಹಿತಿ  ಸಲ್ಲಿಸುವ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿರುವ ಇಲಾಖೆ, ಅಂಥವರ ವಿರುದ್ಧ ಉದ್ಯೋಗದಾತರಿಗೆ ಮಾಹಿತಿ ನೀಡುವುದಾಗಿ ಹೇಳಿದೆ. ರಿಟರ್ನ್ಸ್ ಸಲ್ಲಿಕೆ ವೇಳೆ ಕಡಿಮೆ ಸಂಬಳ ಎಂದು ನಮೂದಿಸುವುದು, ಅಗತ್ಯಕ್ಕಿಂತ ಹೆಚ್ಚು ಕಡಿತಗಳನ್ನು ದಾಖಲಿಸುವುದು ಮಾಡಿದರೆ ತನಿಖೆ ನಡೆಸಲಾಗುವುದು. ಜತೆಗೆ, ಕ್ರಮ ಕೈಗೊಳ್ಳುವಂತೆ ಆಯಾ ತೆರಿಗೆದಾರರ ಕಂಪನಿಗಳಿಗೆ ಶಿಫಾರಸು ಮಾಡುವುದಾಗಿ ಬೆಂಗಳೂರಿನಲ್ಲಿರುವ ಸೆಂಟ್ರಲ್‌ ಪ್ರೊಸೆಸಿಂಗ್‌ ಸೆಂಟರ್‌ ಸುತ್ತೋಲೆ ಕಳುಹಿಸಿದೆ. 

Advertisement

ಆದಾಯ ತೆರಿಗೆ ಇಲಾಖೆಯ ನಿಯಮಗಳ ನ್ವಯ ಇಂಥ ಕೆಲಸಗಳು ಶಿಕ್ಷಾರ್ಹ ಅಪರಾಧ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಬೆಂಗಳೂರಿನಲ್ಲಿ ಕೆಲ ಕಂಪನಿಗಳು ಉದ್ಯೋಗಿಗಳ ಹೆಸರಿನಲ್ಲಿ ನಕಲಿ ರಿಟರ್ನ್ಸ್ ಸಲ್ಲಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದಕ್ಕೆ  ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಕೇಸು ದಾಖಲಿಸಿಕೊಂಡಿದೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next