Advertisement

ಬಿಟ್‌ ಕಾಯಿನ್‌ ಸಂಸ್ಥೆಗಳ ಮೇಲೆ ಐಟಿ ದಾಳಿ

12:25 PM Dec 14, 2017 | Team Udayavani |

ನವದೆಹಲಿ:  ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಸಹಿತ ದೇಶದ ಹಲವೆಡೆ ವರ್ಚುವಲ್‌ ಕರೆನ್ಸಿ ಬಿಟ್‌ ಕಾಯಿನ್‌ ವಿನಿಮಯ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ತನಿಖಾ ತಂಡ ಅದರ ನೇತೃತ್ವ ವಹಿಸಿತ್ತು. ದಿಲ್ಲಿ, ಹೈದರಾಬಾದ್‌, ಕೊಚ್ಚಿ, ಗುರುಗ್ರಾಮ ಸಹಿತ ಪ್ರಮುಖ ನಗರಗಳಲ್ಲಿ ದಾಳಿ, ಶೋಧ ಕಾರ್ಯಾಚರಣೆ ನಡೆಸಲಾಗಿದೆ.

Advertisement

ಬಿಟ್‌ ಕಾಯಿನ್‌ ಮೌಲ್ಯ ಈಗ 15 ಸಾವಿರ ಡಾಲರ್‌ (9 ಲಕ್ಷ ರೂ.) ಆಗಿದ್ದು, ಹಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳ ನಿದ್ದೆಗೆಡಿಸಿದೆ. ಇದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಣ್ಣು ಈ ಸಂಸ್ಥೆಗಳ ಮೇಲೆ ಬಿದ್ದಿದೆ. ಬಿಟ್‌ ಕಾಯಿನ್‌ ಸಂಸ್ಥೆ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲು.

Advertisement

Udayavani is now on Telegram. Click here to join our channel and stay updated with the latest news.

Next