Advertisement

ದೆಹಲಿ:ಲಾಕರ್‌ಗಳನ್ನು ಜಾಲಾಡುತ್ತಿರುವ IT;41ಕೋಟಿ ರೂ ಕಪ್ಪು ಹಣ ಜಪ್ತಿ

01:59 PM Dec 12, 2018 | |

ಹೊಸದಿಲ್ಲಿ: ಆದಾಯ ತೆರಿಗೆ ಅಧಿಕಾರಿಗಳು ಚಾಂದಿನಿ ಚೌಕ್‌ನಲ್ಲಿರುವ ಖಾಸಗಿ ಕಂಪೆನಿಯಾಗಿರುವ ಫ‌ಕೀರ್‌ ಚಂದ್‌ ಲಾಕರ್ ಮತ್ತು ವಾಲ್ಟ್ಸ್‌ ಪ್ರೈ.ಲಿ.ಕಂಪೆನಿಯ ಲಾಕರ್‌ಗಳನ್ನು ಜಾಲಾಡುವುದನ್ನು ಮುಂದುವರಿಸಿದ್ದು  ಇದುವರೆಗೆ ಬರೋಬ್ಬರಿ 41 ಕೋಟಿ ರೂಪಾಯಿ ಕಪ್ಪು ಹಣವನ್ನು ಜಪ್ತಿ ಮಾಡಿದ್ದಾರೆ.

Advertisement

ಬುಧವಾರ ಮತ್ತೆ 5.5ಕೋಟಿಯನ್ನು ಜಪ್ತಿ ಮಾಡಲಾಗಿದೆ.ಆಕ್ಟೋಬರ್‌ 31 ರಿಂದ ನಿರಂತರವಾಗಿ ಶೋಧ ನಡೆಸಿ ಲಾಕರ್‌ಗಳನ್ನು ತೆರೆಯಲಾಗುತ್ತಿದೆ.

ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದು ಇನ್ನಷ್ಟು ನಕಲಿ ಲಾಕರ್‌ಗಳಲ್ಲಿ ಹಣವನ್ನು ಕೂಡಿಡಲಾಗಿರುವ ಸಾಧ್ಯತೆಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next