Advertisement
ಶೇ. 75ಕ್ಕೂ ಅಧಿಕ ಅಂಗವಿಕಲರಿಗೆ ಸ್ವಸಾಮರ್ಥ್ಯದಿಂದ ವಾಹನ ಚಲಾಯಿಸಲು ಸಾಧ್ಯವಿಲ್ಲದ ಕಾರಣ ದ್ವಿಚಕ್ರ ವಾಹನ ನೀಡಲಾಗುತ್ತದೆ. ಪ್ರತೀ ವರ್ಷ ಇಲಾಖೆ ರಾಜ್ಯಮಟ್ಟದಲ್ಲಿ ಇದಕ್ಕಾಗಿ ಗುರಿ ನಿಗದಿಪಡಿಸಿ ಅದನ್ನು ಜಿಲ್ಲಾವಾರು ಹಂಚಿಕೆ ಮಾಡುತ್ತದೆ.
2021-22ನೇ ಸಾಲಿನಲ್ಲಿ ರಾಜ್ಯದಲ್ಲಿ 1,200 ಅಂಗವಿಕಲರಿಗೆ ಉಚಿತ ದ್ವಿಚಕ್ರ ವಾಹನ ಮಂಜೂರು ಮಾಡಲಾಗಿತ್ತು. ಪುತ್ತೂರು-ಕಡಬಕ್ಕೆ 10, ಬೆಳ್ತಂಗಡಿ-4, ಸುಳ್ಯ-6, ಬಂಟ್ವಾಳ-6, ಉಳ್ಳಾಲ – 6, ಮಂಗಳೂರು ನಗರ- 5, ಮಂಗಳೂರು ಉತ್ತರ- 4, ಮೂಡು ಬಿದಿರೆ-5 ಮಂಜೂರಾಗಿದೆ. ದ.ಕ. ಜಿಲ್ಲೆಯಲ್ಲಿ 32 ವಾಹನಗಳ ಗುರಿ ನೀಡ ಲಾಗಿದ್ದು, ಗುರಿ ಮೀರಿ ಸಾಧನೆ ಮಾಡಿ 50 ವಾಹನ ವಿತರಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ ವಾಹನ ವಿತರಣೆಗೆ ಸಂಬಂಧಿಸಿ ಇಲಾಖೆಯಿಂದ ಇನ್ನೂ ಗುರಿ ನಿಗದಿ ಮಾಡಿ ಆದೇಶ ಬಂದಿಲ್ಲ.
Related Articles
ದ.ಕ. ಜಿಲ್ಲೆಗೆ ಕಳೆದ ಆರ್ಥಿಕ ಸಾಲಿನಲ್ಲಿ ಮಂಜೂರಾದ 50 ದ್ವಿಚಕ್ರ ವಾಹನಗಳು ವಿಳಂಬವಾಗಿ ಪೂರೈಕೆಯಾದ ಕಾರಣ ಈಗ ವಿತರಿಸ ಲಾಗುತ್ತಿದೆ. ಅವುಗಳಿಗೆ ವಿಮೆ ಆಗ ಬೇಕಿದೆ. ಇನ್ನೊಂದು ವಾರ ದಲ್ಲಿ ಫಲಾ ನುಭವಿಗಳಿಗೆ ಆರ್‌ಸಿ ನೀಡಲಾಗು ವುದು. ವಿಶೇಷ ಚಕ್ರಗಳ ಅಳವಡಿಕೆ ಸೇರಿದಂತೆ 1 ವಾಹನಕ್ಕೆ 92 ಸಾವಿರ ರೂ. ಸರಕಾರ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಉಚಿತ ವಾಹನ ಪಡೆಯಲು ಶೇ. 75 ಅಥವಾ ಅದಕ್ಕಿಂತ ಹೆಚ್ಚಿನ ವೈಕಲ್ಯ ಇರಬೇಕೆಂಬ ನಿಯಮವಿದ್ದು, ಅದನ್ನು ಪರಿಷ್ಕರಿಸಿ ಶೇ. 50ಕ್ಕೆ ಇಳಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಶೇ. 50 ವೈಕಲ್ಯ ಹೊಂದಿದವರೂ ಉಚಿತ ವಾಹನ ಪಡೆಯಬಹುದು. ಆದಾಯ ಮಿತಿ ಹೆಚ್ಚಳದ ಬಗ್ಗೆ ಇದುವರೆಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ.– ಗೋಪಾಲಕೃಷ್ಣ ,
ಅಂಗವಿಕಲರ ಕಲ್ಯಾಣಾಧಿಕಾರಿ, ದ.ಕ. ಜಿಲ್ಲೆ