Advertisement

ಮತದಾರರ ಪಟಿಗೆ ಹೆಸರು ಸೇರ್ಪಡೆಗೆ ನ. 6 ಕೊನೆ ದಿನ

03:18 PM Oct 20, 2019 | Suhan S |

ಸವಣೂರು: ಕರ್ನಾಟಕ ವಿಧಾನಪರಿಷತ್ತಿನ ಪಶ್ಚಿಮ ಪದವಿಧರ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡುವವರು ನ. 6ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ತಹಶೀಲ್ದಾರ್‌ ವಿ.ಡಿ.ಸಜ್ಜನ್‌ ತಿಳಿಸಿದರು.

Advertisement

ಪಟ್ಟಣದ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಪದವೀಧರ ಕ್ಷೇತ್ರದ ಮತದಾದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಸಲುವಾಗಿ ಶನಿವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಲು ಪದವಿ ಶಿಕ್ಷಣವನ್ನು ಪಡೆದ ಮತದಾರರಿಗೆ ಅವಕಾಶವಿದ್ದು, ನಮೂನೆ 18 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು. 2019 ನ. 1 ದಿನಾಂಕದಿಂದ ಸುಮಾರು 3 ವರ್ಷಗಳ ಹಿಂದೆ ಪದವಿಧರರಾಗಿರಬೇಕು. ಕಳೆದ ಚುನಾವಣೆಯಲ್ಲಿ ಮತದಾರರಾಗಿದ್ದರೂ ಕೂಡಾ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು.

ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ನೀಡಲಾದ ಪದವಿ ಪ್ರಮಾಣಪತ್ರ ದೃಢೀಕರಣಗೊಂಡ ನಕಲು ಪ್ರತಿಯನ್ನು ಲಗತ್ತಿಸಬೇಕು. ವಿಶ್ವವಿದ್ಯಾಲಯವು ನೋಂದಾಯಿತ ಪದವೀಧರನೆಂಬುದಾಗಿ ನೀಡಿದ ನೋಂದಣಿ ಕಾರ್ಡಿನ ದೃಢೀಕರಣ ಪ್ರತಿ, ಕಾಯಂ ರಹವಾಸಿಗೆ ಸಂಬಂಧಿಸಿದಂತೆ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ರೇಷನ್‌ ಕಾರ್ಡ್‌ಗಳಲ್ಲಿ ಕಡ್ಡಾಯವಾಗಿ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿಯನ್ನು ಲಗತ್ತಿಸಬೇಕು. ಮತದಾರರ ನಮೂನೆ 18ರಲ್ಲಿ ಸಂಪೂರ್ಣಮಾಹಿತಿಯನ್ನು ತುಂಬಿರಬೇಕು.

ಅನಾವಶ್ಯಕ ವಿವರ (ತಂದೆ, ತಾಯಿ, ಗಂಡ)ಗಳನ್ನು ತೆಗೆದುಹಾಕಬೇಕು. ಭರ್ತಿ ಮಾಡಿದ ಮತದಾರರ ನೋಂದಣಿಯ ಅರ್ಜಿಯನ್ನು ನ. 6ರ ಒಳಗಾಗಿ ಕಂದಾಯ ಇಲಾಖೆಯ ಚುನಾವಣಾ ವಿಭಾಗದ ಕಚೇರಿಗೆ ತಲುಪಿಸಬೇಕು ಎಂದರು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ, ಸಂಪನ್ಮೂಲ ಅಧಿಕಾರಿ ನಾಗರಾಜ ಬಣಕಾರ, ಅಕ್ಷರದಾಸೋಹ ಅಧಿಕಾರಿ ಸುಣದೊಳ್ಳಿ, ಆರ್‌.ಎಂ.ಭುಜಂಗ, ಟಿಎಚ್‌ಒ ಡಾ| ಚಂದ್ರಕಲಾ, ಮಾಲಿಂಗಪ್ಪ ಕುಂಬಾರ, ನಾಗಪ್ಪ ತಿಪ್ಪಕ್ಕನವರ ಸೇರಿದಂತೆ

Advertisement

ವಿವಿಧ ಇಲಾಖೆಗಳ ತಾಲೂಕುಮಟ್ಟದ ,ಅಧಿಕಾರಿಗಳು ಇದ್ದರು. ಕಾರ್ಯಕ್ರಮವನ್ನು ಚುನಾವಣಾಧಿಕಾರಿ ಆರ್‌.ಎಂ.ಅಡಿಗ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next