ಬೆಂಗಳೂರು: ಯುವತಿಯಿದ್ದ ಕಾರಿನ ಎದುರು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಮಹಾದೇವ ಪುರ ಪೊಲೀಸರು ಬಂಧಿಸಿದ್ದಾರೆ.
ಭಾರತೀನಗರ ನಿವಾಸಿ ಸುನೀಲ್ ಕುಮಾರ್ ಶರ್ಮಾ(26) ಬಂಧಿತ.
ಆರೋಪಿ ನಗರದಲ್ಲಿ ಹೌಪ್ಕೀಪಿಂಗ್ ನೌಕರ. ಜ. 5ರ ರಾತ್ರಿ ಸಂತ್ರಸ್ತೆ ಸ್ನೇಹಿತರ ಜತೆ ಊಟಕ್ಕೆಂದು ಹೋಟೆಲ್ಗೆ ಹೋಗಿದ್ದು, ಬಳಿಕ ಮಹಾದೇವ ಪುರದ ಬಾಗಮನೆ ಟೆಕ್ ಪಾರ್ಕ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡಿದ್ದರು. ಕಾರಿನ ಎದುರು ಬಂದ ಆರೋಪಿ ಯುವತಿಯನ್ನು ಕಂಡು, ಕಾರಿನ ಮುಂಭಾಗ ಬಂದು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಈತನ ವರ್ತನೆಗೆ ಹೆದರಿದ ಆಕೆ ಕೂಡಲೇ ಕಾರಿನ ಡೋರ್ ಲಾಕ್ ಮಾಡಿಕೊಂಡು ಅಲ್ಲಿಂದ ಹೊರಡಲು ಮುಂದಾಗಿದ್ದಾರೆ. ಆದರೆ, ಹಿಂದೆ ಕಾರಿದ್ದ ಕಾರಣ ಆಕೆ ಅಲ್ಲಿಂದ ಹೋಗಲಾಗಿಲ್ಲ.
ಅಲ್ಲದೆ, ಆತ ಹಸ್ತಮೈಥುನ ಮಾಡಿಕೊಂಡೆ, ಕಾರಿನ ಸುತ್ತಲು ಓಡಾಡಿದ್ದಾನೆ. ಅದರಿಂದ ಇನ್ನಷ್ಟು ಗಾಬರಿಗೊಂಡ ಆಕೆ, ಕಾರಿನಲ್ಲೇ ಅವಿತುಕೊಂಡು ಸ್ನೇಹಿತರಿಗೆ ಫೋನ್ ಮಾಡಿ ಮಾಡಿ ಕರೆಸಿಕೊಂಡಿದ್ದರು. ಅವರೆಲ್ಲರೂ ಬರುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದ. ಈ ಸಂಬಂಧ ಸಂತ್ರಸ್ತೆ ಹಾಗೂ ಸ್ನೇಹಿತರು ಎಕ್ಸ್ನಲ್ಲಿ ಘಟನೆಯನ್ನು ಪೋಸ್ಟ್ ಮಾಡಿ, ಕ್ರಮಕ್ಕೆ ಒತ್ತಾಯಿಸಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.