Advertisement

ಬೀಟೆ ನಾಟಾ ಅಕ್ರಮ ಸಾಗಾಣಿಕೆ: ಓರ್ವನ ಬಂಧನ

09:46 PM Apr 29, 2021 | Adarsha |

ರಿಪ್ಪನ್‌ಪೇಟೆ: ಸಮೀಪದ ಅರಸಾಳುವಲಯ ವ್ಯಾಪ್ತಿಯ ಕೊರಗಿ ಅರಣ್ಯಪ್ರದೇಶದಲ್ಲಿ ಸುಮಾರು 2 ಲಕ್ಷ ರೂ.ಮೌಲ್ಯದ ಅಕ್ರಮ ಬೀಟೆ ನಾಟಾವನ್ನುಕಡಿತಲೆ ಮಾಡಿ ವಾಹನದಲ್ಲಿ ಸಾಗಿಸುತ್ತಿದ್ದಆರೋಪಿಯನ್ನು ಅರಣ್ಯಾ ಧಿಕಾರಿಗಳುವಾಹನ ಸಮೇತ ವಶಕ್ಕೆ ಪಡೆದ ಘಟನೆನಡೆದಿದೆ.

Advertisement

ಈ ಕುರಿತು ಖಚಿತ ಮಾಹಿತಿ ಆಧರಿಸಿಗಸ್ತಿನಲ್ಲಿದ್ದ ಅಯನೂರು ವಲಯಅರಣ್ಯಾಧಿಕಾರಿ ಕೆ.ರವಿ ನೇತೃತ್ವದಲ್ಲಿ ಸಿಬ್ಬಂದಿಕಾರ್ಯಾಚರಣೆ ನಡೆಸಿ ಆರೋಪಿಯನ್ನುಬಂಧಿಸಿದೆ.ಅರಸಾಳು ವಲಯ ವ್ಯಾಪ್ತಿಯ ಕೊರಗಿಅರಣ್ಯ ಪ್ರದೇಶದಲ್ಲಿನ ಬೆಲೆ ಬಾಳುವ ಬೀಟೆನಾಟಾವನ್ನು ಅಕ್ರಮವಾಗಿ ಕಡಿತಲೆ ಮಾಡಿಮಾರುತಿ ಓಮ್ನಿ ಕಾರಿನಲ್ಲಿ ತುಂಬಿಕೊಂಡುಸಾಗಿಸುತ್ತಿದ್ದಾರೆಂಬ ಮಾಹಿತಿ ಆಧರಿಸಿಅಯನೂರು ವಲಯ ಅರಣ್ಯಾ ಧಿಕಾರಿನೇತೃತ್ವದ ತಂಡ ವಾಹನವನ್ನು ಬೆನ್ನಟ್ಟಿ ಕುಂಸಿಬಳಿಯ ಶಿಕಾರಿಪುರ ರಸ್ತೆಯಲ್ಲಿ ಓರ್ವಆರೋಪಿಯನ್ನು ಬಂಧಿಸಿದ್ದಾರೆ.

ಸುನೀಲ್‌ಬಿನ್‌ ಸುರೇಶಪ್ಪ ಬಂಧಿತನಾಗಿದ್ದು, ಆತನಿಂದಬೀಟೆ ನಾಟಾ ವಶಪಡಿಸಿಕೊಂಡಿದ್ದಾರೆ.ಉಳಿದ ಇಬ್ಬರು ಅರೋಪಿಗಳಾದರವಿ ಕುಂಸಿ ಹಾಗೂ ಗವಟೂರುಗ್ರಾಮದ ಸೀತಾರಾಮ್‌ ಎಂಬವರುಪರಾರಿಯಾಗಿದ್ದಾರೆ ಎನ್ನಲಾಗಿದೆ.ಪತ್ತೆ ಕಾರ್ಯಚರಣೆಯಲ್ಲಿ ಉಪವಲಯಅರಣ್ಯಾ ಧಿಕಾರಿಗಳಾದ ಎನ್‌.ಸಿ.ನಾಗರಾಜ್‌,ಎನ್‌.ಎಂ.ವಸಂತಕುಮಾರ್‌, ಅರಣ್ಯರಕ್ಷಕರಾದ ಎಂ.ವಿಜಯ, ಎಂ.ದಸ್ತಗಿರ್‌,ವಾಹನ ಚಾಲಕರಾದ ಶಿವರಾಜ್‌, ಅವಿನಾಶ್‌ಮತ್ತು ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next