Advertisement

ಧರೆಗುರುಳಿದ ಮರಗಳ ತೆರವು

06:12 PM May 24, 2021 | Team Udayavani |

ರಾಮನಗರ: ಶನಿವಾರ ರಾತ್ರಿ ಸುರಿದಗಾಳಿ ಮಳೆಗೆ ನಗರದ 6 ಮತ್ತು 7ನೇವಾರ್ಡ್‌ಗಳಲ್ಲಿ ಮರಗಳು ಮತ್ತುವಿದ್ಯುತ್‌ ಕಂಬಗಳು ಧರೆಗುರುಳಿದ್ದವು.ಅಗ್ನಿಶಾಮಕ ದಳ, ಬೆಸ್ಕಾಂ ಮತ್ತು ನಗರಸಭೆ ಅಧಿಕಾರಿಗಳ ಜತೆ ಸೇರಿದ ಸ್ಥಳೀಯಯುವ ವೃಂದ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಧರೆಗುರುಳಿದ ಮರಗಳನ್ನು ತೆರವುಗೊಳಿಸಿದ್ದಾರೆ.ಭಾನುವಾÃ ‌ ಬೆಳಗ್ಗೆ  ಬೆಸ್ಕಾಂ ಸಿಬ್ಬಂದಿಉರುಳಿ ಬಿದ್ದ ವಿದ್ಯುತ್‌ ಕಂಬಗ ಳನ್ನು ನಿಲ್ಲಿಸಿ  ತಂತಿಗಳನ್ನು ಅಳವಡಿಸಿದ್ದಾರೆ.

Advertisement

ನಗರದ ಛತ್ರದ ಬೀದಿಯ ಶ್ರೀರಾಮದೇವಾಲಯದ ಬಳಿ ಶನಿವಾರಸಂಜೆ 2 ಭಾರಿ ಗಾತ್ರದ ಮರಗಳು, 3ವಿದ್ಯುತ್‌ ಕಂಬಗಳು ಧರೆಗುರುಳಿದ್ದವು.2 ಕಾರುಗಳು ಜಖಂ ಗೊಂಡಿದ್ದವು, ಈಘಟನೆ ನಡೆದಾಕ್ಷಣ ಕಾರ್ಯೋನ್ಮುಖರಾಗಿದ್ದು ಸುತ್ತಮುತ್ತಲ ಯುವಕರು,ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳು, ಪೊಲೀಸ್‌, ಬೆಸ್ಕಾಂ, ಅಗ್ನಿ ಶಾಮಕದಳದ ಸಿಬ್ಬಂದಿಗೆ ಕರೆ ಮಾಡಿ ಬರಮಾಡಿಕೊಂಡಿದ್ದಾರೆ. ಭಾರಿ ಮಳೆ, ಗಾಳಿಜತೆಗೆ ಕತ್ತಲು ಆವರಿಸಿತ್ತು.

ಆದರೂ ಕೈಚೆಲ್ಲಿ ಕೂರಲಿಲ್ಲ. ಪ್ರಮುಖ ಸಂಪರ್ಕರಸ್ತೆಯಾದ್ದರಿಂದ ರಾತ್ರಿಯೇ ಮರಗಳನ್ನು ರಸ್ತೆಯಿಂದ ತೆರವುಗೊಳಿಸುವಅನಿವಾರ್ಯತೆ ಇತ್ತು. ಈ ಯುವಕರುಉರುಳಿ ಬಿದ್ದ ಮರಗಳ ಕೆಳಗೆ ಯಾರುಸಿಲುಕಿಲ್ಲ ಎಂದು ಮೊದಲು ದೃಢಪಡಿಸಿಕೊಂಡ ನಂತರ ಮರ ಮತ್ತು ವಿದ್ಯುತ್‌ಕಂಬಗಳನ್ನು ತೆರವುಗೊಳಿಸಲು ಆರಂಭಿಸಿದ್ದಾರೆ. ತಡ ರಾತ್ರಿಯ ವೇಳೆಗೆಕಾರ್ಯಾಚರಣೆ ಮುಗಿದಿದೆ.ಭಾನುವಾರ ಬೆಳಿಗ್ಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದ್ಯುತ್‌ ಸಂಪರ್ಕವನ್ನು ಮರುಸ್ಥಾಪಿಸಲು ಶ್ರಮಿಸಿದ್ದಾರೆ.

6ನೇ ವಾರ್ಡಿನಲ್ಲಿಯೂತೆಂಗಿನಮರವೊಂದು ವಿದ್ಯುತ್‌ ಸರಬರಾಜು ಜಾಲದ ಮೇಲೆ ಉರುಳಿ ಬಿದ್ದಿತ್ತು. ಭಾನುವಾರ ಬೆಳಗ್ಗೆ ಇದನ್ನುಸರಿಪಡಿಸಲಾಗಿದೆ, 6, 7 ಮತ್ತು ಸುತ್ತಮುತ್ತಲ ಬಡಾವಣೆಗಳಲ್ಲಿ ಇಡೀ ಶನಿವಾರ ಇಡೀ ರಾತ್ರಿ ವಿದ್ಯುತ್‌ ಸರಬರಾಜು ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next