Advertisement

ಭೀಕರ ಕಾರು ಅಪಘಾತ: ಪ್ರಸಿದ್ಧ ಮರಾಠಿ ಚಿತ್ರನಟಿ ಈಶ್ವರಿ ದೇಶಪಾಂಡೆ ಸಾವು

04:49 PM Sep 22, 2021 | Team Udayavani |

ಪಣಜಿ: ಪ್ರಸಿದ್ಧ ಮರಾಠಿ ಚಿತ್ರನಟಿ ಈಶ್ವರಿ ದೇಶಪಾಂಡೆ ಹಾಗೂ ಆಕೆಯ ಸ್ನೇಹಿತ ಶುಭಂ ದೆಗಡೆ ರವರು ಗೋವಾದ ಬಾಗಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿರುವ ಭೀಕರ ಘಟನೆ ಸಂಭವಿಸಿದೆ. ಈಶ್ವರಿ ದೇಶಪಾಂಡೆ ಕಾರು ರಸ್ತೆ ಪಕ್ಕದ ನದಿಗೆ ಬಿದ್ದು ಈ ಘಟನೆ ಸಂಭವಿಸಿದೆ.

Advertisement

ಈ ಭೀಕರ ಘಟನೆಯು ಗೋವಾ ಮತ್ತು ಮಹಾರಾಷ್ಟçದ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ರಸ್ತೆ ತೀರಾ ಕಿರಿದಾಗಿದ್ದರಿಂದ ಈ ಅಪಘಾತ ಸಂಭವಿಸಿರ ಬಹುದೆಂದು ಊಹಿಸಲಾಗುತ್ತಿದೆ.

ಇದನ್ನೂ ಓದಿ:ಪ್ರವಾಹದ ನಡುವೆಯೂ ಡೋಣಿ ನದಿ ದಾಟಲು ಹೋದ ವ್ಯಕ್ತಿ ನೀರು ಪಾಲು : ಶೋಧ ಕಾರ್ಯ

ಈ ಘಟನೆಗೆ ಸಂಬಂಧಿಸಿದಂತೆ ಗೋವಾದ ಹಣಜುಣ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖಾ ಕಾರ್ಯ ಕೈಗೆತ್ತಿಕೊಂಡಿರುವುದಾಗಿ ಪೋಲಿಸ್ ನಿರೀಕ್ಷಕ ಸೂರಜ್ ಗಾವಸ್ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next