Advertisement

ಮೀನು ಹಿಡಿಯಲು ಹೋಗಿ ನೀರುಪಾಲು: ದಿನಕಳೆದರೂ ಸಿಗದ ಬಾಲಕನ ಕುರುಹು

08:10 PM Oct 08, 2021 | Team Udayavani |

ಮೂಡಲಗಿ : ತಾಲೂಕಿನ ಕಮಲದಿನ್ನಿ ಗ್ರಾಮದ ಬಳಿ ಇರುವ ಘಟಪ್ರಭಾ ನದಿಯಲ್ಲಿ ಮೀನುಗಳನ್ನು ಹಿಡಿಯಲು ನದಿಗೆ ಹೋಗಿದ್ದ ಯುವಕ ಮುಳುಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಗುರುವಾರ ಸಂಜೆ ಕಮಲದಿನ್ನಿ ಗ್ರಾಮದ ಪರಿಶುರಾಮ ಹಾದಿಮನಿ ಹಾಗೂ ತನ್ನ ಮಗ ಉದಯ (17) ಇಬ್ಬರು ಸೇರಿ ಘಟಪ್ರಭಾ ನದಿಗೆ ಮೀನುಗಳನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಯುವಕ ನದಿ ದಾಟಿ ಮತ್ತೆ ಮರಳಿ ಬರುವಾಗ ನದಿಯ ನೀರಿನ ಸೆಳೆತಕ್ಕೆ ಮುಳುಗಿದ್ದಾನೆ. ನಂತರ ತಂದೆ ಪರಿಶುರಾಮ ನದಿಗೆ ಹಾರಿ ಹುಡುಕಾಟ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ತಾಲೂಕಿನ ಹುಣಶ್ಯಾಳ ಪಿವೈ ವ್ಯಾಪ್ತಿ ರಾತ್ರಿ 8 ಗಂಟೆಗೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಕಾರ್ಯಾಚರಣೆ ಪ್ರಾರಂಭಿಸಿದರು, ಆದರೆ ರಾತ್ರಿ ವೇಳೆ ಕಾರ್ಯಾಚರಣೆಗೆ ಅಡೆತಡೆಯಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೋಳಿ, ಸ್ಥಳದಲ್ಲೇ ಬಿಡು ಬೀಟ್ಟಿದರು. ಮುಂಜೆನಾ ಕಾರ್ಯಾಚರಣೆ ಪ್ರಾರಂಭಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶುಕ್ರವಾರ ಮಧ್ಯಾಹ್ನದ ವರೆಗೆ ಕಾರ್ಯಾಚರಣೆ ನಡೆಸಿದರು. ಯುವಕನ ದೇಹ ಸಿಗದಿದ್ದಾಗ ನೂರಿತ ಎಸ್.ಡಿ.ಆರ್.ಎಫ್ ಗೆ ನೇರವ ಕೇಳಿದರು.

ಇದನ್ನೂ ಓದಿ:ಪಚ್ ಬಾಳೆ ಬೆಳೆದು ಯಶಸ್ಸು ಕಂಡ Udupiಯ ಕೃಷಿಕ

ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಎಸ್‍ಡಿಆರ್‍ಎಫ್ ತಂಡದಿಂದ ಬೋಟ್ ಮೂಲಕ ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಶುಕ್ರವಾರ ಬೆಳಗ್ಗೆಯಿಂದ ಘಟಪ್ರಭಾ ನದಿಯ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿರುವುದರಿಂದ ಸ್ವಲ್ಪ ಮಟ್ಟಿಗೆ ಕಾರ್ಯಾಚರಣೆಗೆ ಅಡೆತಡೆ ಉಂಟಾಗಿದೆ.

Advertisement

ಗುರುವಾರ ರಾತ್ರಿಯಿಂದ ಕಾರ್ಯಾಚರಣೆ ತೊಡಗಿದ್ದರು ಸಹ ಇಲ್ಲಿಯವರೆಗೂ ಯುವಕನ ಮೃತದೇಹ ಪತ್ತೆಯಾಗಿಲ್ಲ. ಇದರಿಂದ ಯುವಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳದಲ್ಲಿ ಗೋಕಾಕ ಅಗ್ನಿಶಾಮದಳ ಸಹಾಯಕ ಅಧಿಕಾರಿ ಸದಾನಂದ ಮಳವೆಂಕಿ ನೇತೃತ್ವದ ತಂಡ ಮತ್ತು ಬೆಳಗಾವಿ ಎಸ್‍ಡಿಆರ್‍ಎಫ್ ಅಧಿಕಾರಿ ಸಂಗಪ್ಪ ತೋಳಮಟ್ಟಿ ನೇತೃತ್ವದ ತಂಡದ ಹಾಗೂ ಪೊಲೀಸ್ ಸಿಬ್ಬಂದಿಗಳು ನಿರಂತರವಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಘಟನಾಸ್ಥಳಕ್ಕೆ  ಅಗ್ನಿ ಶಾಮಕ ಜಿಲ್ಲಾಧಿಕಾರಿ ಶಶಿಧರ್ ನೀಲಗಾರ ಭೆಟ್ಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next