ಕೊರಟಗೆರೆ: ತುಂಬಾಡಿ ಟೋಲ್ ಪ್ಲಾಜಾ ಸಮೀಪದ ಪೆಟ್ಟಿಗೆ ಅಂಗಡಿ ಮುಂಭಾಗ ನಿಂತಿದ್ದ ದ್ವಿಚಕ್ರ ವಾಹನದ ಮೇಲೆ ಕೊರಟಗೆರೆ ಅಬಕಾರಿ ನಿರೀಕ್ಷಕಿ ಶ್ರೀ ಲತಾ ನೇತ್ರತ್ವದ ಅಬಕಾರಿ ಪೋಲೀಸರ ತಂಡ ದಾಳಿ ನಡೆಸಿ ಇಬ್ಬರು ಆರೋಪಿಗಳಿಂದ 70 ಸಾವಿರ ಮೌಲ್ಯದ 600ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿರುವ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿ ತುಂಬಾಡಿ ಗ್ರಾಪಂ ವ್ಯಾಪ್ತಿಯ ದಾಸರಹಳ್ಳಿ ಸಮೀಪದ ಟೋಲ್ ಪ್ಲಾಜಾದ ಬಸ್ ನಿಲ್ದಾಣದ ಇರುವ ಪೆಟ್ಟಿಗೆ ಅಂಗಡಿ ಮುಂಭಾಗ ನಿಂತಿದ್ದ ದ್ವಿಚಕ್ರ ವಾಹನ ಮೇಲೆ ದಾಳಿ ನಡೆಸಿದಾಗ ಸುಮಾರು 70 ಸಾವಿರ ಮೌಲ್ಯದ 600 ಗ್ರಾಂನಷ್ಟು ಸೊಪ್ಪು, ಹೂವು ಬೀಜ ಹಾಗೂ ತೆನೆ ಮಿಶ್ರಿತ ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮಧುಗಿರಿ ತಾಲ್ಲೂಕು ಕಾಟಗಾನಹಟ್ಟಿಯ ಶಿವಣ್ಣ ಮತ್ತು ಕೊರಟಗೆರೆ ತಾಲ್ಲೂಕು ವೀರನಗರದ ವಾಸಿಯಾದ ಯಲ್ಲಪ್ಪ ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿ ಎನ್ ಡಿಪಿಎಸ್ ಕಾಯ್ದೆ ಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಹಾನಗಲ್ ಉಪ ಚುನಾವಣೆ : ಮುಖಂಡರ ಜೊತೆ ಡಿಕೆಶಿ ಚರ್ಚೆ
ದಾಳಿಯ ವೇಳೆ ಅಬಕಾರಿ ನಿರೀಕ್ಷಕಿ ಶ್ರೀ ಲತಾ, ಉಪ ನಿರೀಕ್ಷಕಿ ವೈಷ್ಣವಿ ಕುಲಕರ್ಣಿ, ಸಿಬ್ಬಂದಿಗಳಾದ ದಾದಪೀರ್, ರಂಗಧಾಮಯ್ಯ, ಮಲ್ಲಿಕಾರ್ಜುನ್, ಮಂಜುಳ, ಮಧು ಉಪಸ್ಥಿತರಿದ್ದರು.