ಕೊರಟಗೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಆಗತಾನೆ ಜನಿಸಿರುವ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು ಕೊರಟಗೆರೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅನುಮಾನಸ್ಪಾದವಾಗಿ ಹೆಣ್ಣು ಮಗು ಬೇಡ ಎನ್ನುವ ದೃಷ್ಟಿಯಿಂದ ಶೌಚಾಲಯದಲ್ಲಿ ಹಾಕಿರುವುದೂ ಅಥವಾ ಯಾವುದೋ ಅನೈತಿಕ ಸಂಭಂದದಿಂದ ಜನಿಸಿರುವ ಮಗುವೂ ಎನ್ನುವುದು ಪೋಲಿಸ್ ತನಿಖೆಯಿಂದ ಹೊರಬರಬೇಕಿದೆ.
ಸರ್ಕಾರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ, ಇದರಲ್ಲಿ ಎದ್ದು ಕಾಣುತ್ತಿದೆ. ಏಕೆಂದರೆ ರಾತ್ರಿ ಸಮಯದಲ್ಲಿ ಒಬ್ಬರೂ ಅಥವಾ ಇಬ್ಬರೂ ವೈದ್ಯರೂ ಇರುತ್ತಾರೆ. ರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳ ಸಂಖ್ಯೆಯು ಕಡಿಮೆ ಇರುತ್ತದೆ.ಅದರಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಪೂಟೇಜ್ ಮೂಲಕ ತನಿಖೆ ಹೊರಬರಬಹುದೇ ಎಂದು ಕಾದು ನೋಡಬೇಕಿದೆ.
ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಪುಷ್ಷಪಲತಾ ಮಾತನಾಡಿ ಆಸ್ಪತ್ರೆಯ ಸಿಬ್ಬಂದಿಗಳು ಶೌಚಾಲಯವನ್ನು ಶುಚಿಗೊಳಿಸಲು ಹೋದಂತಹ ಸಮಯದಲ್ಲಿ ಮಹಿಳಾ ಶೌಚಾಲಯದಲ್ಲಿ ಆಗತಾನೆ ಜನಿಸಿರುವಂತಹ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು, ಕೂಡಲೇ ಕೊರಟಗೆರೆ ಪೋಲಿಸ್ ಠಾಣೆಗೆ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ. ಅವರ ಆದೇಶದ ಮೇರೆಗೆ ಆಸ್ಪತ್ರೆಯಲ್ಲಿರುವ ಸಿ.ಸಿ ಟಿವಿ ಯನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪಿರ್ಯಾದಿ ಡಾ.ಶೃತಿ ಎಎಂ ರವರು ಪರೀಕ್ಷೆ ಮಾಡಿ ಮೃತ ಪಟ್ಟಿರುವುದನ್ನು ಖಚಿತ ಪಡಿಸಿಕೊಂಡು ನವ ಜಾತ ಶಿಶುವಿನ ಮರಣಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು, ಈ ಸಂಭಂಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ಪಿಎಸ್ಐ ಮಂಜುಳ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.