Advertisement

ನಿಷೇಧಾಜ್ಞೆ ನಡುವೆ ಜೈಲು ಭರೋ ಚಳವಳಿಗೆ ಯತ್ನ

02:46 PM Apr 21, 2021 | Team Udayavani |

ಕೋಲಾರ: ನಿಷೇಧಾಜ್ಞೆಯ ನಡುವೆಯೂ ಜೈಲ್‌ಭರೋ ಚಳವಳಿ ನಡೆಸಲು ಮುಂದಾದ ಸಾರಿಗೆನೌಕರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ,ಗುಂಪನ್ನು ಚದುರಿಸಿದ ಘಟನೆ ಇಲ್ಲಿನ ಗ್ರಾಮಾಂತರ ಠಾಣೆ ಮುಂಭಾಗ ನಡೆಯಿತು.

Advertisement

ಮಂಗಳವಾರ ಜೈಲು ಭರೋ ಚಳವಳಿಗೆ ಮುಂದಾದಸಾರಿಗೆ ನೌಕರರು, ಇಲ್ಲಿನ ಗ್ರಾಮಾಂತರ ಠಾಣೆಯಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದಾಗಿ ಸ್ವಲ್ಪಹೊತ್ತು ಉದ್ರಿಕ್ತ ವಾತಾವರಣ ಉಂಟಾಗಿತ್ತು. ಈಸಂಬಂಧ 32 ಸಾರಿಗೆ ನೌಕರರನ್ನು ಬಂಧಿಸಿದ್ದು, ಎಲ್ಲರಮೇಲೂ ಕೇಸು ದಾಖಲು ಮಾಡಿಕೊಳ್ಳಲಾಗಿದೆ. ಲಾಠಿಪ್ರಹಾರದಿಂದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಗುಂಪು ಚದುರಿಸಲು ಲಾಠಿ ಚಾರ್ಜ್‌: ಸಾರಿಗೆ ನೌಕರರುತಮ್ಮ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಕಳೆದ 14ದಿವಸಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ಜೈಲ್‌ ಭರೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ನೌಕರರು ಪ್ರತಿಭಟನೆ ನಡೆಸಲು ಅವಕಾಶಇರುವುದಿಲ್ಲ. ಈಗಾಗಲೇ 144 ಸೆಕ್ಷನ್‌ ರೀತಿಯಲ್ಲಿನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರೂ,ಗ್ರಾಮಾಂತರ ಪೊಲೀಸ್‌ ಠಾಣೆ ಎದುರು ನೌಕರರುಜಗ್ಗದೆ ಘೋಷಣೆಗಳನ್ನು ಕೂಗಿದ್ದರಿಂದ ಗುಂಪನ್ನುಚದುರಿಸಲು ಪೋಲಿಸರು ಲಾಠಿ ಪ್ರಹಾರ ನಡೆಸಿದರು.

ಸಂಗೊಂಡಹಳ್ಳಿ ಬಳಿ ನೌಕರರ ಗುಂಪು: ನಗರದಕೆಎಸ್‌ಆರ್‌ಟಿಸಿ ಡಿಪೋ ಮುಂದೆ ನೌಕರರು ಪ್ರತಿಭಟನೆನಡೆಸುತ್ತಾರೆ ಎಂದು ಪೊಲೀಸರುಜಮಾವಣೆಗೊಂಡಿದ್ದರು. ಇದನ್ನು ಕಂಡ ಸಾರಿಗೆ ಸಂಸ್ಥೆನೌಕರರು ಚಿಕ್ಕಬಳ್ಳಾಪುರ ರಸ್ತೆಯ ಸಂಗೊಂಡಹಳ್ಳಿ ಬಳಿನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.

ಮಾತಿನ ಚಕಮಕಿ: ವಿಷಯ ತಿಳಿದ ಪೊಲೀಸರು ಸ್ಥಳಕ್ಕೆಧಾವಿಸಿ ಪ್ರತಿಭಟನೆ ಮಾಡಲು ಅವಕಾಶವಿಲ್ಲ. ಎಲ್ಲರೂಮನೆಗೆ ಹೋಗಿ ಎಂದು ಎಚ್ಚರಿಕೆ ನೀಡಿದರು. ಇದಕ್ಕೆಒಪ್ಪದ ನೌಕರರು ಪ್ರತಿಭಟನೆ ನಡೆಸಲು ಮುಂದಾದರು,ಆಗ ಪೊಲೀಸರು 20 ಮಂದಿ ನೌಕರರನ್ನು ಬಂಧಿಸಿಜೀಪುಗಳನ್ನು ಗ್ರಾಮಾಂತರ ಪೊಲೀಸ್‌ ಠಾಣೆಗೆಕರೆತಂದರು.

Advertisement

ಈ ವೇಳೆ ಪೊಲೀಸರು ಮತ್ತು ನೌಕರರನಡುವೆ ಮಾತಿನ ಚಕಮಕಿ ನಡೆಯಿತು, ಪೊಲೀಸರುಗುಂಪನ್ನು ಚದುರಿಸಿದರು.

ನೌಕರರ ಬಿಡುಗಡೆಗೆ ಒತ್ತಾಯ: ನಂತರಬಂಧನಕ್ಕೊಳಗಾಗಿರುವ ನೌಕರರನ್ನು ಕೂಡಲೇ ಬಿಡುಗಡೆಮಾಡಬೇಕು ಎಂದು ಒತ್ತಾಯಿಸಿ, ಗ್ರಾಮಾಂತರಪೊಲೀಸ್‌ ಠಾಣೆ ಬಳಿ ಸಾರಿಗೆ ಸಂಸ್ಥೆಯ ನೂರಾರುನೌಕರರು ಜಮಾವಣೆಗೊಂಡರು. ನಾವು ನಮ್ಮಬೇಡಿಕೆಗಳ ಈಡೇರಿಕೆಗೋಸ್ಕರ ಪ್ರತಿಭಟನೆನಡೆಸುತ್ತಿದ್ದೇವೆ. ನಮ್ಮ ಬೇಡಿಕೆಗಳು ನ್ಯಾಯಯುತವಾಗಿವೆಎಂದು ಒತ್ತಾಯಿಸುತ್ತಾ ಘೋಷಣೆಗಳನ್ನು ಕೂಗಿದರು.ಇದೇ ವೇಳೆ ಪೊಲೀಸರೂ ಮೈಕ್‌ಗಳ ಮೂಲಕ ಸೆಕ್ಷನ್‌144 ಜಾರಿಗೊಳಿಸಲಾಗಿದೆ. ನೌಕರರು 4 ಮಂದಿಗಿಂತಹೆಚ್ಚಿಗೆ ಸೇರುವ ಹಾಗಿಲ್ಲ.

ಹೆಚ್ಚು ಜನ ಸೇರಿದರೆ ಕಾನೂನಿನರೀತಿಯಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆನೀಡಿದರೂ ನೌಕರರು ಜಾಗಬಿಟ್ಟು ಕದಲಲಿಲ್ಲ.ನೌಕರರನ್ನು ಅಲ್ಲಿಂದ ಹೊರಡುವಂತೆ ತಳ್ಳಿದರೂಅವರು ಹಿಂದಕ್ಕೆ ಹೋಗಲಿಲ್ಲ, ಪೊಲೀಸ್‌ ಠಾಣೆ ಕಡೆಗೆನುಗ್ಗಿ ಬರುತ್ತಿದ್ದರು. ಈ ವೇಳೆ ನೌಕರರಿಗೂ ಪೋಲಿಸರನಡುವೆ ಮಾತಿನ ಚಕಮಕಿ ಉಂಟಾಯಿತಲ್ಲದೆ ನೂಕುನುಗ್ಗಲು ಉಂಟಾಗಿ ಉದ್ರಿಕ್ತ ವಾತಾವರಣಕ್ಕೆಕಾರಣವಾಯಿತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೋಲಿಸರುಹರಸಾಹಸಪಟ್ಟರು, ಈ ವೇಳೆ ಗುಂಪನ್ನು ಚದುರಿಸಲುಪೋಲಿಸರು ಲಾಠಿ ಪ್ರಹಾರ ನಡೆಸಿದರು.ನೌಕರರುಅಲ್ಲಿಂದ ಜಾಗ ಖಾಲಿ ಮಾಡಿದರು ಆಗ ಪರಿಸ್ಥಿತಿ ತಿಳಿಯಾಯಿತು. ಈ ಸಂಬಂಧ ಪೊಲೀಸರು 32 ಮಂದಿನೌಕರರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next