Advertisement

ಜಿಲ್ಲಾ ಕೇಂದ್ರದಲ್ಲಿ ಪೊಲೀಸರ ನಡೆಯಿಂದ ಮಾಂಸಾಹಾರಿಗಳಿಗೆ ನಿರಾಸೆ

03:43 PM Apr 26, 2021 | Team Udayavani |

ಕೋಲಾರ: ವಾರಾಂತ್ಯ ಕರ್ಫ್ಯೂ ವೇಳೆ ನಗರದಲ್ಲಿಭಾನುವಾರ ಕುರಿ, ಕೋಳಿ ಮಾಂಸ, ಮೀನುಮಾರಾಟಕ್ಕೆ ಪೊಲೀಸರು ಅವಕಾಶ ನೀಡದೇ ಇದ್ದಿದ್ದುಮಾಂಸಾಹಾರಿಗಳಿಗೆ ನಿರಾಸೆ ಮೂಡಿಸಿತು.ಬೆಂಗಳೂರು ಸೇರಿದಂತೆ ಜಿಲ್ಲೆ ಮತ್ತು ರಾಜ್ಯದಹಲವೆಡೆ ಭಾನುವಾರ ಮಾಂಸ, ಕೋಳಿ ಮತ್ತುಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

Advertisement

ಖರೀದಿಸಲು ಕೋವಿಡ್‌ ಕಠಿಣ ನಿಯಮಗಳಮಾರ್ಗಸೂಚಿ ಪ್ರಕಾರ ಬೆಳಗ್ಗೆ  6 ರಿಂದ 10 ರವರೆಗೆಅವಕಾಶ ಸರಕಾರ ಕಲ್ಪಿಸಿತ್ತು. ಆದರೆ, ಕೋಲಾರನಗರದಲ್ಲಿ ಮಾತ್ರ ಮಹಾವೀರ ಜಯಂತಿನೆಪವೊಡ್ಡಿ ಪೊಲೀಸರು ಬೆಳಗ್ಗೆಯಿಂದಲೇ ಕೋಳಿ,ಮಾಂಸ ಮತ್ತು ಮೀನು ಮಳಿಗೆಗಳನ್ನುತೆರೆಯಲು ಅವಕಾಶ ನೀಡಲಿಲ್ಲ.

ಇದರಿಂದಭಾನುವಾರದ ಮಾಂಸ ಖರೀದಿಸಲು ಮಾರುಕಟೆ rಗೆಬಂದಿದ  ನೂರಾರು ಮಂದಿ ನಿರಾಸೆಅನುಭವಿಸಬೇಕಾಯಿತು.ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇಜಯಂತಿ ಅಚರಿಸಲು ಅವಕಾಶವಿಲ್ಲ. ಆಚರಿಸದಜಯಂತಿ ನೆಪವೊಡ್ಡಿ ಮಾಂಸ ಮಳಿಗೆಗಳನ್ನುಮುಚ್ಚಿಸುತ್ತಿರುವ ಕುರಿತು ಮಾಂಸದಂಗಡಿಮಾಲಿಕರು ಹಾಗೂ ಸಾರ್ವಜನಿಕರು ಪೊಲೀಸರನ್ನುಪ್ರಶ್ನಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದಕೋಲಾರ ನಗರದ ನೂರಾರು ಮಾಂಸದಮಳಿಗೆಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು.

ಅವಕಾಶವೇ ಇರಲಿಲ್ಲ: ಮಾಧ್ಯಮಗಳಲ್ಲಿಬೆಂಗಳೂರು ಸೇರಿದಂತೆ ವಿವಿಧ ನಗರ ಪಟ್ಟಣಗಳಲ್ಲಿಮಾಂಸ ಖರೀದಿಗೆ ಜನ ಸಾಲುಗಟ್ಟಿ ನಿಂತ ದೃಶ್ಯಗಳುಪ್ರಸಾರವಾಗುತ್ತಿದ್ದರೂ, ಕೋಲಾರದಲ್ಲಿ ಮಾತ್ರಪೊಲೀಸರು ಇದಕ್ಕೆ ಅವಕಾಶವನ್ನೇ ನೀಡಲಿಲ್ಲ.

ತರಕಾರಿ ಖರೀದಿ: ನಗರದ ಅಮ್ಮವಾರಿಪೇಟೆ ವೃತ್ತದಬಳಿ ಇರುವ ಕೋಳಿ, ಮೀನು ಮತ್ತು ಮಾಂಸದಮಾರುಕಟ್ಟೆಯಲ್ಲಿ ಬೆಳಗ್ಗೆ ತೆರೆದಿದ್ದ ಒಂದೆರೆಡುಮಳಿಗೆಗಳನ್ನು ಪೊಲೀಸರು ಬಲವಂತದಿಂದಲೇಮುಚ್ಚಿಸಿದ್ದರಿಂದ, ಸಾರ್ವಜನಿಕರು ಮುಚ್ಚಿಸಿದಮಳಿಗೆಗಳನ್ನು ನೋಡಿ ತರಕಾರಿ ಖರೀದಿಗೆ ಮುಗಿಬೀಳಬೇಕಾಯಿತು.

Advertisement

ಹಳ್ಳಿಗಳತ್ತ ಮುಖ ಮಾಡಿದ ಜನ: ಕೆಲವರುನಗರದ ಹೊರವಲಯದಲ್ಲಿರುವ ಸುತ್ತಮುತ್ತಲಗ್ರಾಮಗಳಲ್ಲಿ ತೆರೆದಿದ್ದ ಮಾಂಸದ ಮಳಿಗೆಗಳಿಂದಮಾಂಸ ತರುವ ಪ್ರಯತ್ನವನ್ನು ಮಾಡಿದರು.ಏಕಾಏಕಿ ನೂರಾರು ಗ್ರಾಹಕರು ಗ್ರಾಮೀಣ ಭಾಗದಕಡೆ ತಿರುಗಿದ್ದರಿಂದ ವಿವಿಧ ಗ್ರಾಮಗಳಲ್ಲಿಯೇದಿನವಿಡೀ ಮಾರಾಟಕ್ಕೆ ಸಜ್ಜಾಗಿದ್ದ ಕೋಳಿ, ಕುರಿಮಾಂಸ ಒಂದೆರೆಡು ಗಂಟೆಗಳಲ್ಲಿಯೇ ಬಿಕರಿಯಾಗಿಅಲ್ಲಿಯೂ ಅಂಗಡಿಗಳನ್ನು ಮುಚ್ಚಲಾಯಿತು.ಇದರಿಂದ ಬಹುತೇಕ ಮಾಂಸಹಾರಿಗಳು ಅಲ್ಲಲ್ಲಿತೆರೆದಿದ್ದ ಕೋಳಿ ಮೊಟ್ಟೆ ಅಂಗಡಿಗಳಿಗೂ ಮುಗಿಬಿದ್ದರು. ಇದರಿಂದ ಕೋಳಿ ಮೊಟ್ಟೆಗಳು ಎಂದಿಗಿಂತಲೂ ಹೆಚ್ಚಿನ ವೇಗದಲ್ಲಿ ವ್ಯಾಪಾರವಾಗತೊಡಗಿತು.ಒಟ್ಟಿನಲ್ಲಿ ಕೋಲಾರ ನಗರದಲ್ಲಿ ಪೊಲೀಸರು ಮಹಾವೀರ ಜಯಂತಿ ನೆಪದಲ್ಲಿ ಮಾಂಸದಂಗಡಿ ಗಳನ್ನುಮುಚ್ಚಿಸಿದ್ದು, ಮಾಂಸದಂಗಡಿ ಮಾಲಿಕರು ಹಾಗೂಮಾಂಸಹಾರಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next