ಕನಕಪುರ: ಕಳ್ಳತನ ಮಾಡುತ್ತಿದ್ದ ಇಬ್ಬರುಆರೋಪಿಗಳನ್ನು ಬಂಧಿಸಿ, ಆವರಿಂದ 7ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳನ್ನುಹಾರೋಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಚಿಕ್ಕಬಳ್ಳಾಪುರ ಮೂಲದ ಶಿಡ್ಲಘಟ್ಟ ಗ್ರಾಮದ ಬಾಲ ಅಪರಾಧಿಗಳು ಎಂದು ಗುರುತಿಸಲಾಗಿದೆ. ತಾಲೂಕಿನ ಹಾರೋಹಳ್ಳಿ ಬಸ್‌ನಿಲ್ದಾಣದ ಬಳಿ ಸೋಮವಾರ ಬೆಳಗ್ಗೆ 5ಗಂಟೆಯಲ್ಲಿ ಬೆಂಗಳೂರು ಕಡೆಯಿಂದ ಕನಕಪುರದಕಡೆಗೆ2 ದ್ವಿಚಕ್ರ ವಾಹನದಲ್ಲಿಬಂದ ಇಬ್ಬರು ಆರೋಪಿಗಳು ಮಾರ್ಗಮಧ್ಯೆ ಹಾರೋಹಳ್ಳಿ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಅದೇ ದಿನ ರಾತ್ರಿಹಾರೋಹಳ್ಳಿ ಮುಖ್ಯ ಪೇದೆ ಬೋರೆಗೌಡ, ಮಧು ಗಸ್ತು ಕರ್ತವ್ಯದಲ್ಲಿದ್ದರು.
ಪೊಲೀಸರನ್ನುಕಂಡು ಇವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಎಚ್ಚೆತ್ತ ಪೊಲೀಸರು ಹಿಂಬಾಲಿಸಕೊಂಡುಹೋಗಿ ಇಬ್ಬರನ್ನು ವಶಕ್ಕೆ ಪಡೆದುವಿಚಾರಣೆಗೆ ಒಳಪಡಿಸಿದಾಗ ದ್ವಿಚಕ್ರವಾಹನ ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಳಿಕ ಠಾಣೆಯಲ್ಲಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹನುಗೋಂಡನಹಳ್ಳಿ, ಮೈಸೂರು ನಗರ, ಹೊಸಕೋಟೆ,ಸೂಲಿಬೆಲೆ ಠಾಣೆ ವ್ಯಾಪ್ತಿಗಳಲ್ಲಿ ಹಲವು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆಳಕಿಗೆ ಬಂದಿದೆ.
ವಿವಿಧ ಕಂಪನಿಯ ಒಟ್ಟು 7ಲಕ್ಷ ಬೆಲೆ ಬಾಳುವ 9 ದ್ವಿಚಕ್ರ ವಾಹಗಳುಮತ್ತು ಇಬ್ಬರು ಆರೋಪಿಗಳನ್ನು ವಶಕ್ಕೆಪಡೆದುಕೊಂಡು ಹಾರೋಹಳ್ಳಿಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದಾರೆ.ಹಾರೋಹಳ್ಳಿ ವೃತ್ತ ನಿರೀಕ್ಷಕಮಲ್ಲೇಶ್, ಪಿಎಸ್‌ಐ ಮುರುಳಿ, ಮುಖ್ಯಪೇದೆ ಬೋರೇಗೌಡ ಮತ್ತುಹಾರೋಹಳ್ಳಿ ಠಾಣೆ ಸಿಬ್ಬಂದಿಉಪಸ್ಥಿತರಿದ್ದರು.