Advertisement

ಕಾಡಾನೆ ದಾಳಿಗೆ ಕಿರು ಹುಣಸೆಯ ಕಾಫಿ ಬೆಳೆಗಾರ ಬಲಿ

06:11 PM Jun 03, 2021 | Team Udayavani |

ಸಕಲೇಶಪುರ: ಮಲೆನಾಡಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಕಾಡಾನೆ ದಾಳಿಯಪರಿಣಾಮ ಕಾಫಿ ಬೆಳೆಗಾರನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.¸

Advertisement

ಒಳಗೋಡು ಹೋಬಳಿ ಕಿರುಹುಣಸೆ ಗ್ರಾಮ ‌ಕಾಫಿ ಬೆಳೆಗಾರ ‌ ಬಿಡ್ಡಯ್ಯ (59) ಮುಂಜಾನೆ 7ಗಂಟೆ ವೇಳೆ ತಮ್ಮ ಮನೆಯ ಸಮೀಪವಿರುವ ತೋಟಕ್ಕೆ ಹೋಗುವಾಗ ‌ಕಾಡಾನೆಯೊಂದು ದಾಳಿನಡೆಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಡಾನೆ ದಾಳೀಯಿಂದ ಬಿಡ್ಡಯ್ಯರವರ ತಲೆಸಂಪೂರ್ಣವಾಗಿ ಜಜ್ಜಿಹೋಗಿದೆ.

ನಿತ್ಯ ಆತಂಕ: ಕಳೆದಮೂರು ತಿಂಗಳಲ್ಲಿ ಕಿರುಹುಣಸೆ ಭಾಗದಲ್ಲೇ ಇಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಇನ್ನು ಕೆಲವರು ಅಪಾರನೋವು ಅನುಭವಿಸಿದ್ದಾರೆ. ಕಾಡಾನೆ ದಾಳಿಯಿಂದಸಾವು ನೋವುಗಳಲ್ಲದೆ ಅಪಾರ ಪ್ರಮಾಣದ ಬೆಳೆನಷ್ಟವಾಗುತ್ತಿದೆ. ಕಿರುಹುಣಸೆ, ವಡೂರು,ಕುಣಿಗನಹಳ್ಳಿ, ಜಮ್ಮನಹಳ್ಳಿ, ರಾಜೇಂದ್ರಪುರ, ಮುಂತಾದ ಗ್ರಾಮಗಳ ಗ್ರಾಮಸ್ಥರುನಿತ್ಯ ಆತಂಕದಲ್ಲೇ  ಇರಬೇಕಾಗಿದೆ.

ಇಲಾಖೆ ವಿರುದ್ಧ ಆರೋಪ: ಜೀವನೋಪಾಯಕ್ಕೆಆಧಾರವಾಗಿರುವ ಜಮೀನುಗಳನ್ನು ಹಾಳುಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯಇಲಾಖೆ ನಿರ್ಲಕ್ಷದಿಂದಲೇ  ಹೆಚ್ಚು ಸಾವು-ನೋವುಗಳು ಸಂಭವಿಸುತ್ತಿವೆ. ಕಾಡಾನೆ ಸಮಸ್ಯೆಗೆಯಾವುದೆ ರೀತಿಯ ಶಾಶ್ವತ ಪರಿಹಾರ ದೊರಕುತ್ತಿಲ್ಲಎಂದು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದ ಡಿಎಫ್ಒಬಸವರಾಜ…, ಶಾಸಕ ಎಚ್‌.ಕೆ ಕುಮಾರಸ್ವಾಮಿ,ಉಪವಿಭಾಗಾಧಿಕಾರಿ ಗಿರೀಶ್‌ ನಂದನ್‌,ಸೇರಿದಂತೆ ಇತರ ಅಧಿಕಾರಿಗಳ ಮೇಲೆ ಆಕೊ›àಶವ್ಯಕ್ತಪಡಿಸಿದರು. ಇದೇ ವೇಳೆ ಮೃತರ ಪುತ್ರಗಣಪತಿ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಈ ರೀತಿಆಗಿದೆಯೆಂದು ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ್ದ ಡಿಎಫ್ಒ ಬಸವರಾಜ್‌ಮಾತನಾಡಿ, ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ 40ಕಿ.ಮೀದೂರ ರೈಲು ಬ್ಯಾರಿಕೇಡ್‌ ಅಳವಡಿಸಬೇಕಾಗಿದ್ದು, ಕೊಡಗಿನ ಭಾಗದಲ್ಲಿ 4.5 ಕಿ.ಮೀ ರೈಲು ಬ್ಯಾರಿಕೇಡ್‌ನ್ನು ಕಳೆದ ವರ್ಷ ಅಳವಡಿಸಲಾಗಿದೆ. ಈಬಾರಿ 22 ಕಿ.ಮೀ ದೂರ ಅಳವಡಿಸಲು ಸರ್ಕಾರಕ್ಕೆಪ್ರಸ್ತಾವನೆ ಕಳುಹಿಸಲಾಗಿದೆ. ರೈಲು ಬ್ಯಾರಿಕೇಡ್‌ಗಳನ್ನು ಅಳವಡಿಸಿದ ನಂತರ ಹೈಕೋರ್ಟ್‌ ಹಾಗೂಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಇನ್ನೆರಡು ದಿನಗÙಲಿ‌ É ಮೃತರಕುಟುಂಬಕ್ಕೆ ಪರಿಹಾರ ಹಣ ಬಿಡುಗಡೆ ಮಾಡಲುಕ್ರಮಕೈಗೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next