Advertisement

ಅಪ್ರಾಪ್ತೆ ಮೇಲೆ ಅತ್ಯಾಚಾರ: ಗರ್ಭಿಣಿಯಾದ 2 ತಿಂಗಳ ಬಳಿಕ ಪ್ರಕರಣ ಬೆಳಕಿಗೆ

04:18 PM Mar 13, 2021 | Team Udayavani |

ನವದೆಹಲಿ: 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಕಳೆದ 6 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರವೆಸಗಲಾಗಿದ್ದು ಇದೀಗ ಬಾಲಕಿ 2 ತಿಂಗಳ ಗರ್ಭಿಣಿಯಾಗಿರುವ ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ಬಾಲಕಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದ್ದು,  ಈಕೆ ಮೇಲೆ ಕಳೆದ 6 ತಿಂಗಳಿನಿಂದ 7 ಜನರು ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಇದನ್ನೂ ಓದಿ:ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ

ಘಟನೆಯ ವಿವರ:

16 ವರ್ಷದ ಬಾಲಕಿ ತನ್ನ ಮನೆಗೆ ಬೇಕಾಗುವ ದಿನಸಿ ಸಾಮಾನುಗಳನ್ನು ತರುವ ಉದ್ದೇಶದಿಂದ ಅಂಗಡಿಗೆ ಹೋದಾಗ ಅಲ್ಲಿದ್ದ ವ್ಯಕ್ತಿ ಈಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ನೆಡೆಸಿದ್ದಾನೆ ಎಂದು ತಿಳಿದು ಬಂದಿದ್ದು, ಆ ನಂತರ  ಆತನ ಸಹಚರರೂ ಕೂಡಾ ಆಕೆಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಯಾರಲ್ಲಾದರೂ ತಿಳಿಸಿದರೆ ಜೀವ ತೆಗೆಯುವುದಾಗಿ ಹೆದರಿಸಿರುವ ಆರೋಪಿಗಳು ಆಕೆ ಅವರ ಮಾತಿನಿಂದ ಭಯಗೊಂಡಿರುವುದನ್ನು ಅರಿತು ಕಳೆದ 6 ತಿಂಗಳಿನಿಂದ ಆಕೆಗೆ ಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ಇದನ್ನೂ ಓದಿ:ಮೌಢ್ಯ ನಿವಾರಣೆಗಾಗಿ ವಿಜಯಪುರ ಜಿ.ಪಂ. ಅಧ್ಯಕ್ಷೆ ಸುಜಾತಾರಿಂದ ಸ್ಮಶಾನ ವಾಸ್ತವ್ಯ

ಇದೀಗ ಆಕೆ ಗರ್ಭಿಣಿಯಾದ ಬಳಿಕ ವಿಚಾರ ತಿಳಿದ ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಣೆ ಮಾಡುವ (POCSO) ಕಾಯ್ದೆಯ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next