Advertisement

ಅತ್ತಿಗೆರೆ ದೇವಸ್ಥಾನದಲ್ಲಿ ಘಂಟೆ ಕಳವು

05:22 PM Aug 22, 2021 | Team Udayavani |

ಕೊಟ್ಟಿಗೆಹಾರ: ಅತ್ತಿಗೆರೆಯ ಶ್ರೀ ಸೋಮೆಶ್ವರ ದೇವಸ್ಥಾನದಲ್ಲಿ 12 ಗಂಟೆಗಳನ್ನು ಕಳವು ಮಾಡಲಾಗಿದೆ.

Advertisement

ಭಾನುವಾರ ಬೆಳಿಗ್ಗಿನ ಜಾವ ನೂಲು ಹಬ್ಬದ ಪ್ರಯುಕ್ತ ಸ್ಥಳೀಯ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿದಾಗ ಗಂಟೆಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ. 12 ಗಂಟೆಗಳ ಮೌಲ್ಯ ಸುಮಾರು 1 ಲಕ್ಷ ವಿದ್ದು ಸ್ಥಳಕ್ಕೆ ವೃತ್ತ ನಿರೀಕ್ಷಕ ಸೋಮಶೇಖರ್, ಬಣಕಲ್ ಠಾಣೆ ಪಿಎಸ್‌ಐ ರೇಣುಕಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ಬಿಲ್ ಗೇಟ್ಸ್ ಗೆ ಪಾಕಿಸ್ತಾನದ ನಖ್ವಿ 100 ಮಿಲಿಯನ್ ಪಂಗನಾಮ ಹಾಕಿದ್ದು ಹೇಗೆ..?

ಈ ಬಗ್ಗೆ ಶ್ರೀಸೋಮೇಶ್ವರ ದೇವಸ್ಥಾನದ ಮುಖ್ಯಸ್ಥ ಎ.ಬಿ ನಾಗೇಶ್ ಬಣಕಲ್ ಠಾಣೆಗೆ ದೂರು ನೀಡಿದ್ದು ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next