Advertisement

ಮಗುಚಿದ ಕಬ್ಬಿನ ಲಾರಿ

03:53 PM Mar 28, 2021 | Team Udayavani |

ಚಾಮರಾಜನಗರ: ಸಾಮರ್ಥ್ಯಕ್ಕಿಂತ ಅಧಿಕ ಭಾರದಕಬ್ಬನ್ನು ಸಾಗಿಸುತ್ತಿದ್ದ ಲಾರಿಯೊಂದು ನಗರದ ಭುವನೇಶ್ವರಿ ವೃತ್ತದಲ್ಲಿ ಶನಿವಾರಮಗುಚಿ ಬಿದ್ದಿದ್ದು ಅದೃಷ್ಟವಶಾತ್‌ ಯಾವುದೇಅಪಾಯ ಸಂಭವಿಸಲಿಲ್ಲ.

Advertisement

ಶನಿವಾರ ಸಂಜೆ ಈ ಕಬ್ಬಿನ ಲಾರಿಬಿ. ರಾಚಯ್ಯ ಜೋಡಿ ರಸ್ತೆಯಿಂದ ಬಂದು ಟ್ರಾಫಿಕ್‌ ಸಿಗ್ನಲ್‌ಬಳಿ ಬಂದಿದೆ. ಇನ್ನು ಕೆಲವೇ ಸೆಕೆಂಡಿಗೆ ಕೆಂಪು ದೀಪ ಬೀಳಬಹುದೆಂದು ಚಾಲಕ ವೇಗವಾಗಿ ಲಾರಿಯನ್ನು ನಂಜನಗೂಡು ಕಡೆ ರಸ್ತೆಗೆ ತಿರುಗಿಸಿದ್ದಾನೆ.

ಆಗ ಲಾರಿ ಅತಿಯಾದಭಾರಕ್ಕೆ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲೇಮಗುಚಿ ಬಿದ್ದಿದೆ. ಆಗ ಅಕ್ಕಪಕ್ಕ ಯಾವುದೇ ವಾಹನ,ಪಾದಚಾರಿಗಳು ಇರಲಿಲ್ಲ. ಹೀಗಾಗಿ ಅಪಾಯವೊಂದುತಪ್ಪಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next