Advertisement

ಬಂಗಾರ ಪಲ್ಕೆ ಜಲಪಾತದಿಂದ ಬಿದ್ದು ಮಣ್ಣಿನಡಿ ಸಿಲುಕಿದ ಯುವಕ

06:11 PM Jan 25, 2021 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ ಪಲ್ಕೆ ಎಂಬಲ್ಲಿ ಅರಣ್ಯ ಪ್ರದೇಶದ ಒಳಗಡೆ ಇರುವ ಜಲಪಾತಕ್ಕೆ ತೆರಳಿದ್ದ ಉಜಿರೆ ಮೂಲದ ಯುವಕ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.

Advertisement

ಉಜಿರೆಯ ನಾಲ್ವರು ಯುವಕರು ಜಲಪಾತದಲ್ಲಿ ಇದ್ದ ಸಮಯದಲ್ಲಿ ಜಲಪಾತದ ಅಂಚಿನ‌ ಗುಡ್ಡ ದಿಢೀರನೆ ಕುಸಿತ ಉಂಟಾದ ಪರಿಣಾಮ ಮೂವರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಮೂವರಲ್ಲಿ ಓರ್ವ ಮಣ್ಣಿನಡಿಯಲ್ಲಿ ಸಿಲುಕಿ ಕಾಣೆಯಾಗಿದ್ದಾನೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಕಾಶಿಬೆಟ್ಡು ವಿನ ವ್ಯಕ್ತಿ ನಾಪತ್ತೆಯಾಗಿದ್ದು, ಇವರ ಮೃತದೇಹ ಮಣ್ಣಿನ ಅಡಿ ಸಿಲುಕಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ‌, ಕಾಂಗ್ರೇಸ್ – ಬಿಜೆಪಿ ಸರಕಾರ : ಡಿಕೆಶಿ ವ್ಯಂಗ್ಯ

ಅರಣ್ಯದಂಚಿನಲ್ಲಿ ಇರುವ ಜಲಪಾತ ಇದಾಗಿದ್ದು, ಜನವಸತಿಯಿಂದ ದೂರವಿದೆ. ಇತ್ತೀಚೆಗಷ್ಟೆ ಜಲಪಾತಕ್ಕೆ ನಿಷೇಧ ಹೇರುವಂತೆ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಒತ್ತಡ ಹೇರಿದ್ದರು. ಇದೀಗ ಘಟನೆ ವಿಚಾರ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಹಾಗೂ ಸ್ಥಳೀಯರು ತೆರಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next