ಬೆಂಗಳೂರು: ವೇತನ ಪರಿಷ್ಕರಣೆಗೆ ಒತ್ತಾಯಿಸಿಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 10ನೇದಿನಕ್ಕೆ ಕಾಲಿರಿಸಿದೆ. ಸಕಾಲಕ್ಕೆ ಸರಿಯಾಗಿ ಸರ್ಕಾರಿಬಸ್ ಸೌಕರ್ಯಗಳಿಲ್ಲದ ಹಿನ್ನೆಲೆಯಲ್ಲಿ ಗುರುವಾರಬೆಳಗ್ಗೆ ಊರಿನಿಂದ ಬೆಂಗಳೂರಿಗೆ ಮರಳಿದ್ದ ಜನರು ಪರದಾಡುವಂತಾಯಿತು. ದೂರದೂರಿನಿಂದ ಪ್ರಯಾಣಿಕರನ್ನು ಹೊತ್ತುಬಂದ ಖಾಸಗಿ ಮತ್ತು ಕೆಲ ಸರ್ಕಾರಿ ಬಸ್‌ಗಳುಬೆಳಗ್ಗೆ 4.30ರ ವೇಳೆ ಮೆಜೆಸ್ಟಿಕ್ ತಲುಪಿದವು.
ಆದರೆಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ನಗರ ಇತರೆಡೆತೆರಳಲು ಬಸ್ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿಜನರು ಪರಿತಪಿಸಿದರು.ಅನೇಕಲ್, ಜಿಗಣಿ, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ,ಹೊಸೂರು ರಸ್ತೆ ಪ್ರದೇಶಗಳತ್ತ ತೆರಳಲು ಬೆಳಗ್ಗೆ 5.30ರವೇಳೆ ಖಾಸಗಿ ಬಸ್‌ಗಳಿದ್ದವು.
ಆದರೆ ಚಂದಾಪುರಕ್ಕೆತೆರಳಲು ಒಬ್ಬ ಪ್ರಯಾಣಿಕ ಒಂದು ಸೀಟಿಗೆ100ರೂ.ನೀಡಬೇಕಾಗಿತ್ತು. ಈ ಬಗ್ಗೆ ಸಾರ್ವಜನಿಕರುಖಾಸಗಿ ಬಸ್ ಸಿಬ್ಬಂದಿಯನ್ನು ಪ್ರಶ್ನಿಸಿದರೂ ಪ್ರಯೋಜವಾಗಲಿಲ್ಲ. ಆ ಹಿನ್ನೆಲೆಯಲ್ಲಿ ಕೆಲಸಕ್ಕೆ ತೆರಳಬೇಕಾಗಿದ್ದವರುಹೆಚ್ಚು ದರ ನೀಡಿ ಬಸ್‌ನಲ್ಲಿ ಸಾಗಿದರು.ಈ ವೇಳೆ ಮಾತನಾಡಿದ ಎಲೆಕ್ಟ್ರಾನಿಕ್ ಸಿಟಿಯಲ್ಲಿಗಾರೆಕೆಲಸ ಮಾಡಿ ಜೀವನ ಸಾಗಿಸುತ್ತಿರುವಕಾರ್ಮಿಕರ ಸಂಗಯ್ಯ,ಸರ್ಕಾರಿ ಬಸ್‌ಯಿಲ್ಲಹಿನ್ನೆಲೆಯಲ್ಲಿ ಖಾಸಗಿ ಬಸ್ ಸಿಬ್ಬಂದಿ ಬಾಯಿಗೆಬಂದ ದರ ಕೇಳುತ್ತಿದ್ದಾರೆ ಎಂದು ದೂರಿದರು.
ಮಕ್ಕಳು,ಪತ್ನಿ ಸೇರಿದಂತೆ 5 ಮಂದಿ ಇದ್ದೇವೆ.ಎಲೆಕ್ಟ್ರಾನಿಕ್ ಸಿಟಿಗೆ 500ರೂ.ಕೇಳುತ್ತಾರೆ ಎಂದುಅಸಮಾಧಾನ ವ್ಯಕ್ತಪಡಿಸಿದರು.ಖಾಸಗಿ ಚಾಲಕರಿಗೆ ವಾರ್ನಿಂಗ್: ಖಾಸಗಿ ಬಸ್‌ಸಿಬ್ಬಂದಿ ದುಪ್ಪಟ್ಟು ಹಣ ವಸೂಲು ಮಾಡುತ್ತಿದ್ದಾರೆಎಂಬುವುದನ್ನು ಅರಿತು ಬಿಎಂಟಿಸಿ ಬಸ್ ನಿಲ್ದಾಣಕ್ಕೆಭೇಟಿ ನೀಡಿದ ಆರ್‌ಟಿಒ ಅಧಿಕಾರಿಗಳು ಪರಿಶೀಲನೆನಡೆಸಿದರು.
ಅಲ್ಲದೆ ದುಪ್ಪಟ್ಟು ಹಣ ಪಡೆಯುತ್ತಿದ್ದಖಾಸಗಿ ಚಾಲಕರಿಗೆ ಆರ್‌ಟಿಒ ಅಧಿಕಾರಿಗಳುವಾರ್ನಿಂಗ್ ನೀಡಿದರು.
ಮೆಟ್ರೋ ಸ್ಟೇಷನ್‌ನಲ್ಲಿ ಸಾಲುಗಟ್ಟಿದ್ದ ಜನರು:ವಿಜಯನಗರ, ಚಂದ್ರಾಲೇಔಟ್, ಕೆಂಗೇರಿ, ಮಾಗಡಿರಸ್ತೆ, ಬನಶಂಕರಿ,ಜಯನಗರ, ಕೋಣನಕುಂಟೆ,ಬಸವನಗುಡಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆತೆರಳಲು ಮೆಜೆಸ್ಟಿಕ್‌ನಲ್ಲಿ ಬಸ್‌ಗಳಿಲ್ಲದ ಹಿನ್ನೆಲೆಯಲ್ಲಿಜನರು ಮೆಟ್ರೋ ಸ್ಟೇಷನ್‌ನಲ್ಲಿ ಸಾಲುಗಟ್ಟಿದ್ದು ಕಂಡುಬಂತು. ಬೆಳಗ್ಗೆ 6.30ಕ್ಕೆ ಮೆಟ್ರೋ ಸೇವೆಆರಂಭವಾಗಲಿದೆ ಎಂದು ತಿಳಿದಿದ್ದ ಪ್ರಯಾಣಿಕರುಮೆಟ್ರೋ ಬಾಗಿಲಲ್ಲೆ ಕುಳಿತುಕೊಂಡಿದ್ದರು.ಆದರೆ 7ಗಂಟೆಗೆ ಮೆಟ್ರೋ ಸೇವೆ ಆರಂಭವಾಯಿತು.