Advertisement

ವಿಜಯಪುರ: ಮತದಾನ ಮಾಡುವ ವಿಡಿಯೋ, ಫೋಟೋ ತೆಗೆದು ವೈರಲ್ ಮಾಡಿದಾತನ ಬಂಧನ

07:01 PM Oct 30, 2021 | Team Udayavani |

ವಿಜಯಪುರ: ಸಿಂದಗಿ ವಿಧನಸಭೆ ಉಪ ಚುನಾವಣೆಯ ಮತದಾನದ ವೇಳೆ ಎರಡು ಕಡೆಗಳಲ್ಲಿ ಗುಪ್ತ ಮತದಾನ ವ್ಯವಸ್ಥೆಯನ್ನು ವಿಡಿಯೋ ಹಾಗು ಫೋಟೋ ತೆಗೆದು ವೈರಲ್ ಮಾಡಿದ ಘಟನೆ ಜರುಗಿವೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ತಾನು ಮಾಡಿರುವ ಮತದಾನದ ವಿಡಿಯೋ ಮಾಡಿರುವ ಓರ್ವ ಮತದಾರ ಅದನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವೈರಲ್ ಮಾಡಿದ್ದಾನೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಮತದಾನ ಮಾಡಿರುವ ಮತ್ತೋರ್ವ ಮತದಾರ ವಿವಿ ಪ್ಯಾಟ್ ಯಂತ್ರದಲ್ಲಿ ಮತದಾನ ಮಾಡಿ ಚೀಟಿಯ ಚಿತ್ರವನ್ನು ಫೋಟೋ ತೆಗೆದು ಸಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಡಳಿತದ ಮತದಾನದ ವಿಡಿಯೋ ಮಾಡಿರುವ ಪ್ರಕರಣ ಮತಗಟ್ಟೆ ಸಂಖ್ಯೆ 135 ರಲ್ಲಿ ಜರುಗಿದ್ದನ್ನು ಪತ್ತೆ ಮಾಡಿದೆ. ಅಲ್ಲದೇ ಚುನಾವಣಾ ನಿಯಮದ ಗುಪ್ತಮತದಾನಕ್ಕೆ ವಿರುದ್ಧವಾಗಿ ಮತಗಟ್ಟೆಯಲ್ಲಿ ಅಕ್ರಮವಾಗಿ ಮೊಬೈಲ್ ತೆಗೆದುಕೊಂಡು ಹೋಗಿ, ಗೌಪ್ಯವಾಗಿರಬೇಕಿದ್ದ ಮತದಾನ ಮಾಡಿದ್ದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾಗಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next