Advertisement

ಕೊಣಾಜೆ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನ

01:47 PM Oct 19, 2021 | Team Udayavani |

ಉಳ್ಳಾಲ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ.

Advertisement

ಬಿಜೆಪಿ ಕಾರ್ಯಕರ್ತ , ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ (38) ಎಂಬವರ ಕೊಲೆಗೆ ಯತ್ನಿಸಲಾಗಿದೆ. ಬೈಕಲ್ಲಿ ಬಂದ ಮೂವರು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

ಸ್ನೇಹಿತ ಮಂಜುನಾಥ್ ಜೊತಗೆ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಪವಾಡಸದೃಶವಾಗಿ ತಲವಾರು ದಾಳಿ ಕೈಗೆ ಮಾತ್ರ ಬಿದ್ದಿದೆ. ಗಾಯಾಳು ಪ್ರಕಾಶ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ವಾರ ಕೊಣಾಜೆ ಜಂಕ್ಷನ್ ನ  ಕೊಣಾಜೆ ಸ್ಟೋರ್ಸ್ & ಸ್ವೀಟ್ಸ್ ಮಳಿಗೆಯ ಮಾಲಕನ ಪುತ್ರ ಉಸ್ಮಾನ್ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ವಿಚಾರದಲ್ಲಿ ಸ್ಥಳೀಯರು ಹಲ್ಲೆನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಪ್ರಕರಣದಲ್ಲಿ ಪ್ರಕಾಶ್ ಭಾಗವಹಿಸಸದಿದ್ದರು ಇವರ ಹೆಸರನ್ನು ಪ್ರಸ್ತಾಪುಸಲಾಗಿತ್ತು.ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

ಘಟನೆ ರಾತ್ರಿ ನಡೆದಿದ್ದರೂ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಘಟನೆ ವಿಚಾರ ಸಂಘಟನೆಗಳಿಗೆ ತಿಳಿಯುತ್ತಿದ್ದಂತೆ ಪ್ರಕಾಶ್ ಅವರ ಯೋಗ ಕ್ಷೇಮ ವಿಚಾರಿಸಲು ಮಧ್ಯಾಹ್ನ ಅವರ ಜಿನಸು ಅಂಗಡಿಗೆ ಕಾರ್ಯಕರ್ತರು ಆಗಮಿಸುತ್ತಿದ್ದಂತೆ ಕೊಣಾಜೆ ಪೊಲೀಸರು ಆಗಮಿಸಿ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿ ತನಿಖೆಯನ್ನು ತೀವ್ರ ಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next