ಉಳ್ಳಾಲ: ಕೊಲ್ಯ ಮೂಕಾಂಬಿಕ ದೇವಸ್ಥಾನ ಬಳಿಯ ಎರಡು ಮನೆಗಳನ್ನು ಒಡೆದು ಕಳವಿಗೆ ವಿಫಲ ಯತ್ನ ನಡೆಸಿದ್ದರೂ ಮೂರು ವಾಚ್ ಗಳನ್ನು ಮಾತ್ರ ಕಳವುಗೈಯಲು ಯಶಸ್ವಿಯಾಗಿದ್ದು, ಮನೆಯ ಯಜಮಾನರೊಬ್ಬರು ಬೊಬ್ಬೆ ಹಾಕಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದ್ದು ಮನೆಯ ಸೊತ್ತುಗಳು ಹಾನಿಯಾಗಿದೆ.
ವಿದೇಶದಲ್ಲಿ ನೆಲೆಸಿರುವ ಸುರೇಶ್ ಎಂಬವರಿಗೆ ಸೇರಿದ ಮನೆಯ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕಪಾಟು ಪುಡಿಗೈದು, ಮನೆಯೊಳಗಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೈದು ಹಣ ಹಾಗೂ ಒಡವೆಗಾಗಿ ಹುಡುಕಾಡಿ ಏನೂ ಸಿಗದೇ ವಾಪಸ್ಸಾಗಿದ್ದಾರೆ. 2015 ರಲ್ಲಿ ಸುರೇಶ್ ಅವರ ಮನೆಗೆ ನುಗ್ಗಿದ್ದ ಕಳ್ಳರು 45 ಪವನ್ ತೂಕದ ಚಿನ್ನಾಭರಣಗಳನ್ನು ದೋಚಿದ್ದರು. ಆ ವೇಳೆಯೂ ಮನೆಯಲ್ಲಿ ಯಾರೂ ಇರಲಿಲ್ಲ. ಆದರೆ ಈವರೆಗೂ ಕಳ್ಳರ ಸುಳಿವು ಲಭ್ಯವಾಗಿಲ್ಲ. ಇದೀಗ ಅದೇ ಮನೆಗೆ ಮತ್ತೆ ನುಗ್ಗಿದ ಕಳ್ಳರ ತಂಡ ಕಳವಿಗೆ ಯತ್ನಿಸಿದೆ.
ಇದನ್ನೂ ಓದಿ: ಯಡಿಯೂರಪ್ಪ ಮತ್ತು ಅವರ ಮಗ ಜೆಸಿಬಿಯಲ್ಲಿ ಅಗೆದು ಹಣ ಮಾಡುತ್ತಿದ್ದಾರೆ: ಸಿದ್ದು ಆಕ್ರೋಶ
ಬೊಬ್ಬೆ ಹಾಕಿದ್ದರಿಂದ ಪರಾರಿಯಾದ ಕಳ್ಳರು : ಸುರೇಶ್ ಮನೆಯ ಪಕ್ಕದ ರಾಜೇಶ್ ಎಂಬವರ ಮನೆಯೊಳಕ್ಕೆ ಬೀಗ ಒಡೆದು ಒಳನುಗ್ಗಿದ ಕಳ್ಳರು ಕಪಾಟನ್ನು ಜಾಲಾಡಿ ಮೂರು ವಾಚ್ ಗಳನ್ನು ಕಳವು ನಡೆಸಿದ್ದು, ಈ ವೇಳೆ ಬೆಡ್ ರೂಂನ ಲಾಕ್ ತೆರೆಯಲು ಯತ್ನಿಸಿದ್ದು ಬೀಗ ಹಾಕಿ ಕೋಣೆಯಲ್ಲಿ ಮಲಗಿದ್ದರಿಂದ ಕಳ್ಳರು ವಿಫಲರಾಗಿದ್ದಾರೆ. ರಾಜೇಶ್ ಬೊಬ್ಬೆ ಹೊಡೆದಾಗ ಇವರ ಮೇಲಿನಮನೆಯಲ್ಲಿದ್ದ ಬಾಡಿಗೆದಾರರು ಎಚ್ಚೆತ್ತು ಕೆಳಗೆ ಬಂದಾಗ ಆಗಂತುಕರು ಪರಾರಿಯಾದರು.ರಾಜೇಶ್ ಹೊರ ಬರುತ್ತಿದ್ದರೆ ದರೋಡೆಗೆ ಯತ್ನಿಸುವ ಸಾಧ್ಯತೆ ಇತ್ತು ಎಂದು ರಾಜೇಶ್ ವಿವರಿಸುತ್ತಾರೆ. ರಾಜೇಶ್ ಅವರ ಕುಟುಂಬದ ಸದಸ್ಯರು ಜಾಸರಗೋಡಿಗೆ ತೆರಳಿದ್ದು, ಮನೆಯಲ್ಲಿ ಒಬ್ಬರೇ ಇದ್ದರು.
ಸ್ಥಳಕ್ಜೆ ಉಳ್ಳಾಲ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.