Advertisement

ವಿಶ್‌’ಮಾಡಿ ಇಕ್ಕಟ್ಟಿಗೆ ಸಿಲುಕಿದ ಕಾರ್ಯಕರ್ತರು!

02:19 AM Jan 09, 2021 | Team Udayavani |

ಉಳ್ಳಾಲ : ಮಕ್ಕಳ ಕಳ್ಳರು ಎಂದು ಭಾವಿಸಿ ಬೆಂಗಳೂರು ಮೂಲದ ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಸ್ಥಳೀಯರು ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸ್‌ ಠಾಣೆಯಲ್ಲಿ ನಿಜಾಂಶ ತಿಳಿದ ಬಳಿಕ ಕಾರ್ಯಕರ್ತರು ಪೊಲೀಸ್‌ ಠಾಣೆಯಿಂದ ತೆರಳಿದರು.
ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮಹಮ್ಮದ್‌ ನಲಪ್ಪಾಡ್‌ ಬೆಂಬಲಿಗರೇ ಮಕ್ಕಳ ಕಳ್ಳರೆಂದು ಸ್ಥಳೀಯರ ಕೈಗೆ ಸಿಲುಕಿ ಕೊಂಡವರು.

Advertisement

ಘಟನೆಯ ವಿವರ : 
ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ನಲಪ್ಪಾಡ್‌ ಪರವಾಗಿ ಬೆಂಗಳೂರಿನಿಂದ ಯುವ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳೂರಿಗೆ ಆಗಮಿಸಿದ್ದರು. ಶನಿವಾರ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಡಿಪು ಬ್ಲಾಕ್‌ ನಲ್ಲಿ ಮುಡಿಪು ಬ್ಲಾಕ್‌ ಯೂತ್‌ ಕಾಂಗ್ರೆಸ್‌ಗೆ ಸ್ಪರ್ಧಿಸುತ್ತರುವ ನಲಪ್ಪಾಡ್‌ ಬೆಂಬಲಿಗನ ಪರವಾಗಿ ಪ್ರಚಾರ ನಡೆಸುವ ನಿಟ್ಟಿನಲ್ಲಿ ಮುಡಿಪುವಿಗೆ ತೆರಳುತ್ತಿದ್ದ ಈ ತಂಡ ದೇರಳಕಟ್ಟೆ ಬಳಿ ಚಿಪ್ಸ್‌ ತೆಗೆದುಕೊಂಡು ಹೊರ ಬಂದಾಗ ಪಕ್ಕದಲ್ಲಿದ್ದ ಇಬ್ಬರು ಮಕ್ಕಳನ್ನು ಕರೆದು ವಿಶ್‌ ಮಾಡಿದ್ದರು.

ಮಕ್ಕಳು ಹೆತ್ತವರ ಬಳಿ ಯುವಕರ ತಂಡ ನಮ್ಮನ್ನು ಕರೆದರು ಎಂದು ತಿಳಿಸಿದಾಗ ತಪ್ಪಾಗಿ ಅರ್ಥೈಸಿಕೊಂಡ ಸ್ಥಳೀಯರು, ಸಂಘಟನೆಗಳ ಯುವಕರು ಕಣಚೂರು ಆಸ್ಪತ್ರೆ ಬಳಿ ಕಾರನ್ನು ಸುತ್ತುವರೆದು ಪೊಲೀಸರಿಗೆ ಒಪ್ಪಿಸಿದರು. ಸ್ಥಳೀಯರು ಬೆಂಗಳೂರು ಕನ್ನಡ ಮಾತನಾಡುತ್ತಿದ್ದ ಮತ್ತು ಬೆಂಗಳೂರು ನೋಂದಾವಣೆಯ ಕಾರನ್ನು ತಪ್ಪಾಗಿ ತಿಳಿದದ್ದೇ ಘಟನೆಗೆ ಕಾರಣವಾಗಿದೆ. ಕೊಣಾಜೆ ಪೊಲೀಸ್‌ ಠಾಣೆಗೆ ಮುಡಿಪು ಬ್ಲಾಕ್‌ ಕಾಂಗ್ರೆಸ್‌ನ ಯುವ ಮುಖಂಡರು ಆಗಮಿಸಿ ಪೊಲೀಸರಿಗೆ ಮನವರಿಕೆ ಮಾಡಿದ ಬಳಿಕ ಪ್ರಕರಣ ಸುಖಾಂತ್ಯಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next