ಉಡುಪಿ: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಕಿವಿ ಕೇಳಿಸದ, ಮಾತನಾಡಲು ಬಾರದ 15 ವರ್ಷ ಪ್ರಾಯದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾದ ಅಪರಾಧಿ ಹರೀಶ (33) ನಿಗೆ 15 ವರ್ಷಜೈಲು ಶಿಕ್ಷೆ, 15 ಸಾವಿರ ದಂಡ ಹಾಗೂ ಸರಕಾರದಿಂದ ಸಂತ್ರಸ್ತ ಪರಿಹಾರ ನಿಧಿಯಡಿ ನೊಂದ ಬಾಲಕಿಗೆ 9 ಲಕ್ಷ ರೂ. ನೀಡಲು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಯಾದವ್ ವನಮಾಲಾ ಆನಂದರಾವ್ ಅವರು ಫೆ. 26ರಂದು ಆದೇಶ ನೀಡಿದ್ದಾರೆ.
22 ಸಾಕ್ಷಿಗಳ ಪೈಕಿ ಸಂತ್ರಸ್ತೆ ತಾಯಿ ಸೇರಿದಂತೆ 13 ಮಂದಿ ಸಾಕ್ಷ್ಯ ನುಡಿದಿದ್ದರು. ಡಿಎನ್‌ಎ ವರದಿ ಕೂಡ ಅಭಿಯೋಜನೆಗೆ ಪೂರಕವಾಗಿತ್ತು.
ಗರಿಷ್ಠ ಮೊತ್ತದ ಪರಿಹಾರ :
ಬಾಲಕಿಯ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ, ಸಂತ್ರಸ್ತೆ ಜೀವನದ ಭದ್ರತೆಗಾಗಿ ಗರಿಷ್ಠ ಪರಿಹಾರವನ್ನು ನೀಡಬೇಕು ಎಂದು ಪೋಕೊÕ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದಿಸಿದ್ದರು. ಅದರಂತೆ ಸಂತ್ರಸ್ತ ಬಾಲಕಿಗೆ ಸರಕಾರದಿಂದ 9 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಧೀಶರು ಆದೇಶಿಸಿ¨ªಾರೆ. ಪೋಕೊÕà ಪ್ರಕರಣದಲ್ಲಿ ಇಷ್ಟು ಮೊತ್ತದ ಪರಿಹಾರ ನೀಡಿದ್ದು ಉಡುಪಿಯಲ್ಲಿ ಇದು ಮೊದಲ ಬಾರಿಯಾಗಿದೆ.