Advertisement

ಪಿತ್ರೋಡಿ: ಗೃಹಿಣಿ ನೇಣಿಗೆ ಶರಣು

05:45 PM Jun 17, 2021 | Team Udayavani

ಕಟಪಾಡಿ : ಗೃಹಿಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಉದ್ಯಾವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ

Advertisement

ಪಿತ್ರೋಡಿ ನಿವಾಸಿ ಸುಕನ್ಯ(52) ಎಂಬವರು ನೇಣಿಗೆ ಶರಣಾದ ಮಹಿಳೆ.

ಮನೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಸ್ಥಳೀಯರ ಸಹಕಾರದಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದರೂ ಅದಾಗಲೇ ಆಕೆ ಅಸುನೀಗಿದ್ದಾರೆ ಎನ್ನಲಾಗಿದೆ.

ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಚೇತನ್ ಕುಮಾರ್ ಸಹಿತ 2ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಇದನ್ನೂ ಓದಿ: ವೈರಲ್; ಗಲಭೆ ನಿಯಂತ್ರಣದ ವೇಳೆ ಪ್ಲಾಸ್ಟಿಕ್ ಕುರ್ಚಿ, ಬುಟ್ಟಿ ಬಳಕೆ ಮಾಡಿದ ಪೊಲೀಸರ ಅಮಾನತು

Advertisement

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.  ಕಾಪು ಪೊಲೀಸ್ ಠಾಣಾ ಎ.ಎಸ್ಸೈ ದಯಾನಂದ್ ಮತ್ತು ಆರಕ್ಷಕ ಸಿಬ್ಬಂದಿಯವರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next