Advertisement

ಶಿಡ್ಲಘಟ್ಟದಲ್ಲಿ ಮೈನಾರಿಟಿ ಕಾಂಗ್ರೆಸ್ ಅಧ್ಯಕ್ಷನ ಕೊಲೆ ಆರೋಪಿಗಳ ಬಂಧನ

10:29 PM Mar 20, 2021 | Team Udayavani |

ಶಿಡ್ಲಘಟ್ಟ: ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಸಮೀಪ ಮೈನಾರಿಟಿ ಕಾಂಗ್ರೆಸ್ ಅಧ್ಯಕ್ಷ ಅಮ್ಜದ್ ನವಾಜ್ ಎಂಬಾತನನ್ನು ಹಾಡುಹಗಲೇ ಭೀಕರವಾಗಿ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕಲ್ಲು ಅಲಿಯಾಸ್ ಖಲಂದರ್, ಅಮಿತ್, ರಘು ಅಲಿಯಾಸ್ ರಾಘವೇಂದ್ರ, ಅಕ್ಷಯ್,ಶ್ರೀನಾಥ್ ಬಂಧಿತ ಆರೋಪಿಗಳು.

ಜನನಿಬಿಡ ಪ್ರದೇಶದಲ್ಲಿ ಹಾಡುಹಗಲೇ ಸಿನಿಮಾ ಶೈಲಿಯಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ ಮಾಡಿದ ದೃಶ್ಯವನ್ನು ಕಂಡು ನಾಗರಿಕರು ಭಯಭೀತರಾಗಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಬಯಲಾಗಿದ್ದು ಅಮ್ಜದ್ ನವಾಝ್ ಸಂಬಂಧಿ ಕಲ್ಲು ಅಲಿಯಾಸ್ ಕಲಂದರ್ ಎಂಬಾತನ ಮೇಲೆ ಕೆಲ ವರ್ಷಗಳ ಹಿಂದೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು ಸುಮಾರು ವರ್ಷಗಳಿಂದ ಅವಕಾಶಕ್ಕೆ ಕಾಯುತ್ತಿದ್ದ ಕಲ್ಲು ಅಲಿಯಾಸ್ ಕಲಂದರ್ ಮತ್ತು ಆತನ ಸಹಚರರು ಸಂಚು ರೂಪಿಸಿ ಮೈನಾರಿಟಿ ಕಾಂಗ್ರೆಸ್ ಅಧ್ಯಕ್ಷ ಅಮ್ಜದ್ ನವಾಜ್ ಹತ್ಯೆ ನಡೆಸಿದರು.

Advertisement

ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next