ಮೈಸೂರು: ಸಂಚಾರ ಪೊಲೀಸರ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಹೋದ ಬೈಕ್ ಸವಾರನ ಮೇಲೆ ಟಿಪ್ಪರ್ ಹರಿದು ಮೃತಪಟ್ಟಿರುವ ಘಟನೆ ಹಿನಕಲ್ ರಿಂಗ್ ರಸ್ತೆಯ ಆರ್‌ಎಂಪಿ ವೃತ್ತದ ಬಳಿ ಸೋಮವಾರ ಸಂಜೆ ಜರುಗಿದೆ.
ಎಚ್.ಡಿ.ಕೋಟೆಯ ಹಂಪಾಪುರದ ಕಲ್ಲೇನಹಳ್ಳಿ ನಿವಾಸಿ ದೇವರಾಜು (43) ಮೃತ ದುರ್ದೈವಿ. ಇವರೊಂದಿಗೆ ಇದ್ದ ಸುರೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಉದ್ರಿಕ್ತರಾದ ಸಾರ್ವಜನಿಕರು, ಪೊಲೀಸರ ಜೀಪ್ ಜಖಂ ಗೊಳಿಸಿ, ಎಎಸ್‌ಐ ಸೇರಿದಂತೆ ಸ್ಥಳದಲ್ಲಿದ್ದ ಮೂವರ ಮೇಲೆ ಥಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣನಿರ್ಮಾಣವಾಗಿತ್ತು. ಪರಿಣಾಮ ಸಂಚಾರ ವ್ಯವಸ್ಥೆ ಒಂದುಗಂಟೆಗೂ ಹೆಚ್ಚು ಕಾಲ ಅಸ್ತವ್ಯಸ್ತಗೊಂಡಿತ್ತು.
ಘಟನೆ ವಿವರ: ಬೋಗಾದಿಯಿಂದ ಹಿನಕಲ್ ಕಡೆಗೆದೇವರಾಜು ಅವರು ಸುರೇಶ್ ಅವರೊಂದಿಗೆ ಬೈಕಿನಲ್ಲಿತೆರಳುವಾಗ ಆರ್‌ಎಂಪಿ ವೃತ್ತದ ಬಳಿ ವಿವಿಪುರಂ ಸಂಚಾರಪೊಲೀಸರು ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಪೊಲೀಸರನ್ನು ಕಂಡ ಬೈಕ್ ಸವಾರ ದೇವರಾಜು, ತಕ್ಷಣಚಾಲನೆಯಲ್ಲಿ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ.ಇದೇ ವೇಳೆಗೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಗೆ ಸಂಚಾರ ಪೊಲೀಸರ ತಪಾಸಣೆ ಕಾರ್ಯವೇಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರುಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಥಳಿಸಿದ್ದಾರೆ. ಅಲ್ಲದೇಸ್ಥಳದಲ್ಲಿದ್ದ ಪೊಲೀಸರ ಜೀಪ್ ಜಖಂಗೊಳಿಸಿದರು. ಇದರಿಂದಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್ ಗೌಡ , ಗೀತ ಪ್ರಸನ್ನ ಭೇಟಿ ನೀಡಿ ಉದ್ವಿಗ್ನ ಸ್ಥಿತಿಯನ್ನು ತಿಳಿಸಿಗೊಳಿಸಿದರು. ಈ ಸಂಬಂಧ ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.