Advertisement

ವಿಜಯಪುರ : ಕಾರಿಗೆ ಬೈಕ್ ಡಿಕ್ಕಿ-  ಶಿಕ್ಷಕ ಸಾಹಿತಿ ಸಾವು

07:50 AM Jun 20, 2022 | Team Udayavani |

ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯ ಕೋಮಲ್ ಡಾಬಾ ಹತ್ತಿರ ರವಿವಾರ ರಾತ್ರಿ ಬೈಕ್ ಒಂದು ಕಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವು ಬದುಕಿನ ನಡುವೆ ಸಿಲುಕಿದ್ದ ಇಲ್ಲಿನ ವಿವಿವ ಸಂಘದ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ಮಹೇಶ ಕಿತ್ತೂರ (48) ಚಿಕಿತ್ಸೆ ಫಲಿಸದೆ ರವಿವಾರ ಮಧ್ಯರಾತ್ರಿ ಜೀವ ತ್ಯಜಿಸಿದರು.

Advertisement

ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರನ್ನು ಬಾಗಲಕೋಟೆಯ ಡಾ.ಕಟ್ಟಿ  ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.ದೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ಮುದ್ದೇಬಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಾರ ಶೋಕ:  ಅವರು ಶರಣರ ವಚನಗಳ ವಿಶ್ಲೇಷಕರಾಗಿದ್ದು ಇದುವರೆಗೆ ಅಂದಾಜು 2800 ವಚನಗಳ ವಿಶ್ಲೇಷಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ತಾಲೂಕಿನ ವಚನ ಸಾಹಿತ್ಯದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಅವರ ದುರಂತ ಸಾವಿಗೆ ಅಪಾರ ಶೋಕ ವ್ಯಕ್ತವಾಗುತ್ತಿದೆ. ನಿಧನ ಹಿನ್ನೆಲೆ ಅವರು ಸೇವೆ ಸಲ್ಲಿಸುತ್ತಿದ್ದ ಶಾಲೆಗೆ ಇಂದು ರಜೆ ಘೋಷಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next