Advertisement

ಮುಂಡಗೋಡ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ ಮಹಿಳೆ

04:19 PM Oct 11, 2021 | Team Udayavani |

ಮುಂಡಗೋಡ: ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರವಿವಾರ ಮುಖ್ಯಮಂತ್ರಿ ಸ್ವಕ್ಷೇತ್ರ ಮತ್ತು ಮುಂಡಗೋಡ ತಾಲೂಕಿನ ಗಡಿ ಭಾಗವಾದ ಹಳವ ತರ್ಲಘಟ್ಟ ಗ್ರಾಮದಲ್ಲಿ ನಡೆದಿದೆ.

Advertisement

ಘಟನೆ ವಿವರ:  ರೈತರು ಆ ಭೂಮಿಯಲ್ಲಿ ಸಾಗುವಳಿ ಮಾಡಲು ಮುಂದಾಗ ವಿಷಯ ತಿಳಿದ ದುಂಡಸಿ ಅರಣ್ಯ ಇಲಾಖೆಯ ಆರ್.ಎಪ್.ಒ ಹಾಗೂ ತಡಸ ಠಾಣೆಯ ಪಿ.ಎಸ್.ಐ ಸ್ಥಳಕ್ಕೆ ಹೋಗಿ ರೈತರಿಗೆ ಇದು ಅರಣ್ಯ ಇಲಾಖೆಯ ಸ್ಥಳವಾಗಿರುವುದರಿಂದ ಯಾರು ಅತಿಕ್ರಮಣ ಮಾಡಲು ಅವಕಾಶವಿಲ್ಲ. ಈ ಸ್ಥಳವನ್ನು ಅರಣ್ಯ ಇಲಾಖೆಯ ಕಾಯ್ದಿಟ್ಟ ಸ್ಥಳವೆಂದು ಕಾಯ್ದಿರಿಸಲಾಗಿದೆ ಎಂದು ಹೇಳಿದ್ದರಂತೆ. ಸ್ಥಳದಲ್ಲಿದ್ದ ರೈತ ಮಹಿಳೆ ಹಾಗೂ ರೈತರು ವಿಡೀಯೊ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ಆರ್.ಎಪ್.ಒ

ಮತ್ತು ಪೊಲೀಸರು  ಚಿತ್ರೀಕರಣ ಮಾಡಬೇಡಿ ಇಲಾಖೆಯವರು ಮಾಡುತ್ತಾರೆ ಎಂದು ಹೇಳಿದಾಗ ಮಾತಿಗೆ ಮಾತು ನಡೆದಿದೆ ಎಂದು ತಿಳಿದುಬಂದಿದೆ. ಮತ್ತೇ ಸ್ಥಳದಲ್ಲಿದ್ದ ಮಹಿಳೆ ಚಿತ್ರೀಕರಣ ಮಾಡಲು ಹೋಗಿದ್ದಾಳೆ ಈ ವೇಳೆ  ಅರಣ್ಯ ಮತ್ತು ಪೊಲೀಸ ಸಿಬ್ಬಂದಿಗಳು ಮೊಬೈಲನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ.

ಇದರಿಂದ ಬೇಸರಗೊಂಡ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾಳೆ ಎನ್ನಲಾಗಿದೆ. ಅಸ್ವಸ್ಥಗೊಂಡ ಮಹಿಳೆಯನ್ನು ಮುಂಡಗೋಡ ಸರಕಾರಿ ತಾಲೂಕಾ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸಗೆ ಕರೆದೊಯ್ಯಲಾಗಿದೆ.

ಹಾವೇರಿ ಜಿಲ್ಲಾ ಮುಖ್ಯಮಂತ್ರಿ ಸ್ವಕ್ಷೇತ್ರವಾದ ಶಿಗ್ಗಾಂವ ತಾಲೂಕಿನ ದುಂಡಶಿ ವಲಯದ ಹಳವ ತರ್ಲಘಟ್ಟ (ಕುನ್ನೂರ) ಗ್ರಾಮದ ಭೂ ರಹಿತ ಸಣ್ಣ ರೈತರು ಸ್ವಾತಂತ್ರ‍್ಯ ಪೂರ್ವದಿಂದಲೂ ಏಳು ಸರ್ವೇ ನಂಬರ್ ಗಳಾದ  150ಕ, 150ಡ, 155, 167, 174, 186, 187 ಒಟ್ಟು ಕ್ಷೇತ್ರ 203 ಎಕರೆ 26 ಗುಂಟೆ ಗಳಲ್ಲಿ ಉಳುಮೆ ಮಾಡಿಕೊಂಡು ತಮ್ಮ ಉಪಜೀವನ ನಡೆಸುತಿದ್ದರು ಆದರೆ ಸುಪ್ರೀಂ ಕೋರ್ಟ್ ಆದೇಶ ಹಾಗೂ ಕರ್ನಾಟಕ ಗೆಜೆಟ್ ಪತ್ರದಲ್ಲಿ ಪಾಸ್ ಆಗಿದೆ ಅಂತಾ ಸುಳ್ಳು ಹೇಳಿ ಅರಣ್ಯ ಇಲಾಖೆಯವರು ಹಾಗೂ ಪೊಲೀಸ್ ಅವರು ಬಡ ರೈತರ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ ಅವರನ್ನು ಒಕ್ಕಲೆಬ್ಬಿಸಿದ್ದಾರೆ. ಇದಕ್ಕೆ ಸಂಬಧಪಟ್ಟಂತೆ ಅವರಲ್ಲಿ ಯಾವುದೇ ದಾಖಲೆಗಳೂ ಸಹಿತ ಇಲ್ಲಾ ಮತ್ತು ಈಗ ಅವರು ನೆಡುತೋಪನ್ನು ಕತ್ತರಿಸಿಕೊಂಡು ಹೋಗಿದ್ದಾರೆ. ಈಗ ಆ ಜಮೀನಿನಲ್ಲಿ ರೈತರು ಸಾಗುವಳಿ ಮಾಡಲಿಕ್ಕೆ ಹೋದರೆ ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ.

Advertisement

ರೈತರು ಈ ಜಮೀನುಗಳನ್ನು ಸಕ್ರಮ ಮಾಡಿಕೊಡಲು ಫಾರಂ ನಂಬರ್ ೫೩ ರಲ್ಲಿ ಅರ್ಜಿಯನ್ನು ಸಹ ಕೊಟ್ಟಿದ್ದಾರೆ. ಹಿಂದಿನ ಶಾಸಕರು ಪ್ರತಿಯೊಬ್ಬ ರೈತರಿಗೂ 2 ಎಕರೆ ಜಮೀನು ಕೊಡುತ್ತೇವೆಂದು ಹೇಳಿದ್ದರು ಆದರೆ ನೀತಿಸಂಹಿತೆ ಜಾರಿಯಾಗಿದ್ದರಿಂದ ಅದು ಇಲ್ಲಿವರೆಗೂ ನೆನೆಗುದಿಗೆ ಬಿದ್ದಿದೆ ಮತ್ತು ಈಗ ರೈತರು ಉಚ್ಚ ನ್ಯಾಯಾಲಯ ಧಾರವಾಡದ ಆದೇಶದ ಪ್ರತಿಯನ್ನು ಅಕ್ರಮ ಸಕ್ರಮ ಸಮಿತಿಗೆ ಸಲ್ಲಿಸಿದ್ದರೂ ರೈತರ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಮತ್ತು ತಹಸೀಲ್ದಾರರು ರೈತರ ಮೇಲೆ ಇಷ್ಟು ದೌರ್ಜನ್ಯವಾಗುತಿದ್ದರೂ ಇಲ್ಲಿವರೆಗೂ ಯಾವುದೇ ಉತ್ತರ ಕೊಡುತ್ತಿಲ್ಲ ಎಂದು ರಾಮಣ್ಣ ಮತ್ತಿಗಟ್ಟಿ, ಶಂಕರ ಲಮಾಣಿ, ಕಾಸಿಂಸಾಬ ಮುಲ್ಲಾನವರ, ಗೋಪಾಲ ಲಮಾಣಿ, ಮತ್ತು ಸುಜಾತ ಹೂಗಾರ ದೂರಿದರು.

ದುಂಡಸಿ ಆರ್.ಎಪ್.ಒ ರಮೇಶ ಶೇಟಸನ್ನದಿ ಮಾತನಾಡಿ, ಕುನ್ನೂರ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 150ಕ ಮತ್ತು 150 ಡ  ಈ ಸರ್ವೇ ನಂಬರ್ ನಮ್ಮ ಅರಣ್ಯ ನಡೆತೋಪು ಅಂತಾ ಇದೆ. ರವಿವಾರ ಅರಣ್ಯಕ್ಕೆ ಪ್ರವೇಶಿಸಿ ಸಾಗುವಳಿಗಾಗಿ ಬಂದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ರೈತರೊಂದಿಗೆ ಚರ್ಚಿಸುತ್ತಿದ್ದಂತೆ ಅಲ್ಲಿದ್ದ ಮಹಿಳೆ ಕೈ ಯಲ್ಲಿ ಬಾಟಲು ಹಿಡದಿದ್ದಳು ಪಿ.ಎಸೈ ಅವರು ಮಾತನಾಡುತ್ತಿದ್ದಾಗ ಮಹಿಳೆ ಅದನ್ನು ಸೇವಿಸಲು ಮುಂದಾದಳು ಅದನ್ನು ತಡೆಯಲು ಮುಂದಾದೆವು. ಅಷ್ಟರಲ್ಲಿ ಅದನ್ನು ಆ ಮಹಿಳೆ ಕುಡದಿದ್ದಳು. ಆದರೆ ಅದು ವಿಷದ ಬಾಟಲು ಅಲ್ಲ. ವಾಸನೆಯೂ ಇರಲಿಲ್ಲ. ಸಂಜೆ ತರ್ಲಘಟ್ಟ ಗ್ರಾಮಕ್ಕೆ ನಾವು, ತಹಸೀಲ್ದಾರ, ಮತ್ತು ಪೊಲೀಸರು ತೆರಳಿ ಗ್ರಾಮದ  ಜನರಿಗೆ ಕಾನೂನಿನ ಬಗ್ಗೆ ತಿಳಿಸಿದ್ದೇವೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next