Advertisement

ಬೆಟ್ಟ ಇಳಿಯಲು ಆಗದೆ ತಂದೆ-ಮಗ ಪೊಲೀಸರ ಮೊರೆ

03:36 PM Jul 18, 2022 | Team Udayavani |

ಮಧುಗಿರಿ: ವಿಶ್ವದ 2ನೇ ಏಕಶಿಲಾ ಬೆಟ್ಟವಾದ ಮಧುಗಿರಿ ಬೆಟ್ಟವನ್ನು ಹತ್ತಿದ ತಂದೆ-ಮಗ ಮಳೆಬಂದಿದ್ದರಿಂದ ಹೆದರಿ ಪೊಲೀಸರ ಮೊರೆ ಹೋದ ಘಟನೆ ನಡೆದಿದೆ.

Advertisement

ಪಟ್ಟಣದಲ್ಲಿರುವ ಏಕಶಿಲಾ ಬೆಟ್ಟವನ್ನು ಏರಲುಪ್ರತಿ ಭಾನುವಾರ, ರಾಜ್ಯದ ಮೂಲೆ ಮೂಲೆಯಿಂದಚಾರಣಿಗರು ಬರುತ್ತಾರೆ. ಭಾನುವಾರ ಸಹಬೆಂಗಳೂರು ಮೂಲದ ವ್ಯಕ್ತಿಗಳು ಹೆಚ್ಚಿನಸಂಖ್ಯೆಯಲ್ಲಿ ಬೆಟ್ಟ ಹತ್ತಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ಮಳೆಯ ವಾತಾವರಣ ಉಂಟಾಗಿದ್ದು,ಎಲ್ಲರೂ ಬೆಟ್ಟದಿಂದ ವಾಪಸ್‌ ಆಗಿದ್ದರು.

ಆದರೆ ಬೆಂಗಳೂರು ಮೂಲದ ತಂದೆ ಅರ್ಜುನ್‌ ರೆಡ್ಡಿ,ಮಗ ತರುಣ್‌ ಅವರು ಸಂಜೆವರೆಗೂ ಅಲ್ಲೇಇದ್ದರು. ಮದ್ಯಾಹ್ನ 3 ರ ನಂತರ ಸುರಿದ ಮಳೆಗೆ ಇಳಿಜಾರಿನಲ್ಲಿ ಬೆಟ್ಟ ಇಳಿಯಲು ಆಗದೆಆತಂಕಗೊಂಡಿದ್ದು, ಅಲ್ಲಿಂದಲೇ ಪೊಲೀಸರಿಗೆ ಕರೆ ಮಾಡಿ ರಕ್ಷಿಸುವಂತೆ ಮನವಿ ಮಾಡಿದ್ದಾರೆ.

ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿ: ತಕ್ಷಣ ಕಾರ್ಯ ಪ್ರವೃತ್ತರಾದ ಮಧುಗಿರಿ ಪಿಎಸ್‌ಐ ರಮೇಶ್‌ ಹಾಗೂ ಸಿಬ್ಬಂದಿಗಳಾದ ವೆಂಕಟೇಶ್‌, ರಾಜಕುಮಾರ್‌, ವಿಜಯಕುಮಾರ್‌, ಹರ್ಷ,ರಂಗೇಗೌಡ, ಕೊಟ್ರೇಶ್‌ ಇತರರು ಸ್ಥಳಕ್ಕೆ ಆಗಮಿಸಿ ಬಿರುಸಿನ ಕಾರ್ಯಾಚರಣೆ ನಡೆಸಿದ್ದು, ಸಂಜೆ 7 ರ ಹೊತ್ತಿಗೆ ತಂದೆ ಹಾಗೂ ಮಗನನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು.

ಸೂಕ್ತ ಜಾಗೃತಿ ಮೂಡಿಸಬೇಕಿದೆ: ಹಿಂದೆ ಹಲವಾರು ಘಟನೆಗಳಲ್ಲಿ ಬೆಟ್ಟ ಹತ್ತಿದ ಟೆಕ್ಕಿಗಳು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದರು. ಇಲ್ಲಿ ಪುರಾತತ್ವ ಇಲಾಖೆಯಿದ್ದು, ರಕ್ಷಣೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುತ್ತಿಲ್ಲ.ವಿಪರೀತ ಮಳೆ-ಗಾಳಿಯ ಸಮಯದಲ್ಲಿ ಚಾರಣಕ್ಕೆಅವಕಾಶ ನೀಡದೆ ಸೂಕ್ತ ಜಾಗೃತಿ ಮೂಡಿಸಬೇಕಿದೆ.ಆದರೆ ಬಾಗಿಲಲ್ಲಿನ ಕಾವಲುಗಾರ ಬಿಟ್ಟರೆ ಯಾರೂ ಅಗತ್ಯ ಮಾರ್ಗದರ್ಶನ ನೀಡುತ್ತಿಲ್ಲ.

Advertisement

ಪೊಲೀಸರು, ನಾಗರಿಕರಿಗೆ ಕೃತಜ್ಞತೆ :

ಕೆಳಗಿಳಿದ ಮೇಲೆ ಮಾತನಾಡಿದ ಅರ್ಜುನ್‌ ರೆಡ್ಡಿ, ಬೆಟ್ಟದ ಮೇಲೆ ಮಳೆ ಹಾಗೂ ವಿಪರೀತಗಾಳಿಯಿದ್ದ ಕಾರಣ ಆತಂಕವಾಗಿತ್ತು. ಮಳೆಕೂಡ ಹೆಚ್ಚಾದ ಕಾರಣ ಕೆಳಗೆ ಇಳಿಯಲುಸಾಧ್ಯವಾಗ ಲಿಲ್ಲ. ನಮ್ಮ ಕರೆಗೆ ಸ್ಪಂದಿಸಿದಪೊಲೀಸರು ತಕ್ಷಣ ನೆರವಿಗೆ ಧಾವಿಸಿದ್ದು,ಯಾವುದೇ ಸಮಸ್ಯೆಯಾಗ ದಂತೆ ಕರೆತಂದರು.ಅದಕ್ಕಾಗಿ ಮಧುಗಿರಿ ಪೊಲೀ ಸರಿಗೂ ಹಾಗೂರಕ್ಷಣೆ ಮಾಡುವಲ್ಲಿ ಸಹಕರಿಸಿ ಧೈರ್ಯತುಂಬಿದ ಮಧುಗಿರಿ ನಾಗರಿಕರಿಗೂ ಧನ್ಯವಾದಗಳನ್ನು ಹೇಳುವುದಾಗಿ ತಿಳಿಸಿದರು.

ಬೆಟ್ಟವು ಏಕಶಿಲೆಯಾಗಿದ್ದು, ಮಳೆ ಸಮಯದಲ್ಲಿ ಅಪಾಯಕಾರಿ. ಇಂತಹ ಸಮಯದಲ್ಲಿ ಚಾರಣ ಮಾಡದಿರುವುದು ಒಳ್ಳೆಯದು. ದಯಮಾಡಿ ಎಲ್ಲರೂ ಈ ಬಗ್ಗೆ ಜಾಗ್ರತೆ ವಹಿಸುವುದು ಅವಶ್ಯಕ. -ರಮೇಶ್‌, ಪಿಎಸ್‌ಐ

Advertisement

Udayavani is now on Telegram. Click here to join our channel and stay updated with the latest news.

Next