Advertisement

ಕುಷ್ಟಗಿ: ತ್ರಿವರ್ಣ ಧ್ವಜಾ ಇರುವ ಕಂಬದ ಮೇಲೆ ಭಗವಧ್ವಜಾ; ಬಿಜೆಪಿ ವಿರುದ್ಧ ಕೈ ಆಕ್ರೋಶ

11:52 AM Aug 10, 2022 | Team Udayavani |

ಕುಷ್ಟಗಿ: ಸ್ವಾತಂತ್ರ್ಯ 75ನೇ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ಇಲ್ಲಿನ ಮಾರುತಿ ವೃತ್ತದಲ್ಲಿ ತ್ರಿವರ್ಣ ಧ್ವಜಾ ಇರುವ ಕಂಬದ ಮೇಲೆ ಭಗವಧ್ವಜಾ ಹಾರಿಸಿರುವುದು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

75ನೇ ಅಮೃತ ಮಹೋತ್ಸವ ಸಂಭ್ರಮಕ್ಕೆ ಬಿಜೆಪಿ ಕುಷ್ಟಗಿ ತಾಲೂಕಿನ ವಕ್ಕಂದುರ್ಗಾದಿಂದ ಕುಷ್ಟಗಿ ವರೆಗೆ ಬೈಕ್ ರ‍್ಯಾಲಿ  ಹಮ್ಮಿಕೊಂಡಿದೆ. ಕುಷ್ಟಗಿ ಬಸವೇಶ್ವರ ವೃತ್ತದಲ್ಲಿ ಸಮಾರೋಪ ಕಾರ್ಯಕ್ರಮ ಪ್ರಯುಕ್ತ ಇಲ್ಲಿನ ಪ್ರಮುಖ ವೃತ್ತಗಳನ್ನು ಕೇಸರಿ, ಬಿಳಿ, ಹಸಿರು ತ್ರಿವರ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿದೆ. 75 ನೇ ಅಮೃತ ಮಹೋತ್ಸವದಲ್ಲಿ ವೃತ್ತಗಳನ್ನು ಅಲಂಕರಿಸಿದ್ದು ಓಕೆ, ಆದರೆ ಅದರ ಮೇಲೆ ಭಗವಧ್ವಜಾ ಯಾಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಸಿದ್ದರಾಮೋತ್ಸವದಂತಹ 10 ಕಾರ್ಯಕ್ರಮ ಮಾಡುವ ಶಕ್ತಿ ಬಿಜೆಪಿಗಿದೆ: ಸಚಿವ ಎಸ್.ಟಿ ಸೋಮಶೇಖರ್

ಬಿಜೆಪಿಯವರಿಗೆ ದೇಶ ಭಕ್ತಿ ತೋರಿಕೆಯಾಗಿದ್ದು ಧರ್ಮವೇ ಮುಖ್ಯವಾಗಿದೆ. ದೇಶವೇ ಸಂಭ್ರಮಿಸುವ ಈ ಸಂದರ್ಭದಲ್ಲಿ ಈ ರೀತಿ ಧರ್ಮ ರಾಜಕಾರಣ ಮಾಡುತ್ತಿರುವುದು ಸರಿ ಅಲ್ಲ ಎಂದು ಯುವ ಕಾಂಗ್ರೆಸ್ ಘಟಕದ ಸಂತೋಷ ಸರಗಣಾಚಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next