ಕೆಜಿಎಫ್: ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಯತ್ನ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಜಿಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್ ಪೇಟೆ ಠಾಣೆಯ ಕಾನ್ಸ್‌ಟೇಬಲ್ ಅಶೋಕ್ ಮೇಲೆ ಹಲ್ಲೆ ನಡೆಸಿದ ಎಫ್.ಬ್ಲಾಕ್‌ನ ನಿವಾಸಿ ರಾಜೇಶ್ (38), ಮಾರಿಕುಪ್ಪಂ ಸಾಮಿಲ್ ಲೈನಿನ ನಿವಾಸಿ ಸಚಿನ್ ಸುಧಾಕರ್ (25) ಅವರನ್ನು ಕೃತ ವೆಸಗಿದ 24 ಗಂಟೆಯಲ್ಲಿಯೇ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.
ಮೇ 8ರಂದು ಆಂಡ್ರಸನ್‌ಪೇಟೆಯ ಚಾಮ ರಾಜಪೇಟೆಯ ವೃತ್ತದಲ್ಲಿ ಕಾನ್ಸ್ ಟೇಬಲ್ ಅಶೋಕ್ ಕರ್ತವ್ಯದಲ್ಲಿದ್ದು, ಲಾಕ್ ಡೌನ್ ಹಿನ್ನೆಲೆ ಯಲ್ಲಿ ಅನಾವಶ್ಯಕವಾಗಿ ದ್ವಿಚಕ್ರವಾಹನಗಳಲ್ಲಿ ತಿರುಗಾಡುತ್ತಿದ್ದವರನ್ನು ತಡೆದು ವಿಚಾರಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಒಬ್ಬ ದ್ವಿಚಕ್ರ ವಾಹನ ಸವಾರನ ಜೊತೆ ಮಾತಿನಚಕಮಕಿ ನಡೆದು ನಂತರ ಆತ ಹೊರಟು ಹೋಗಿದ್ದಾನೆ. ಆನಂತರ ಮಧ್ಯಾಹ್ನ 12.40ಕ್ಕೆ ಪಲ್ಸರ್ ಬೈಕ್‌ನಲ್ಲಿ ಬಂದು ಇಬ್ಬರು ಏಕಾಏಕಿ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ.
ಪರಿಣಾಮ ಅಶೋಕ್‌ಗೆ ರಕ್ತಗಾಯವಾಗಿದೆ. ಆಗಂತಕರು ಪರಾರಿ ಆಗಿದ್ದಾರೆ. ಈ ಸಂಬಂಧ ಆಂಡ್ರಸನ್ ಪೇಟೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಎಸ್‌ಪಿ ಇಲಕ್ಕಿಯಾ ಕರುಣಾಕರನ್‌ಮಾರ್ಗದರ್ಶನದಲ್ಲಿ ವಿಶೇಷ ಅಪರಾಧ ತಂಡ ರಚಿಸಲಾಗಿತ್ತು. ಮೇ 9ರ ಬೆಳಗ್ಗೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆಒಪ್ಪಿಸಲಾಗಿದೆ. ಕೃತ್ಯಕ್ಕೆ ಬಳಸಿದ ಪಲ್ಸರ್ ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಬಿ.ಕೆ.ಉಮೇಶ್ ನೇತೃತ್ವದಲ್ಲಿರಚಿಸಲಾಗಿದ್ದ ವಿಶೇಷ ಅಪರಾಧ ಪತ್ತೆ ತಂಡದ ಸಿಪಿಐ ಕೆ.ನಾಗರಾಜ್, ಪಿಎಸ್‌ಐ ರಾಜೇಶ್ವರಿ, ಮೂರ್ತಿ, ಸಿಬ್ಬಂದಿ ಗೋಪಿ,ಮಹೇಂದ್ರಕುಮಾರ್, ನಾರಾಯಣಸ್ವಾಮಿ, ಬಸವರಾಜು, ನವೀನ್, ವೆಂಕಟೇಶ್ ತೀವ್ರಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿಇಲಕ್ಕಿಯಾ ಕರುಣಾಕರನ್ ತಿಳಿಸಿದ್ದು, ಕಾರ್ಯವನ್ನು ಶ್ಲಾಘಿಸಿದ್ದಾರೆ.