Advertisement

ಮೈಸೂರು ದೋಸೆವಾಲನಿಂದ ಲಕ್ಷಾಂತರ ವಂಚನೆ!: ಒಂಬತ್ತು ವರ್ಷದಿಂದ ಮನೆಗೇ ಬಾರದ ಈ ವಂಚಕ!

01:05 AM Aug 27, 2021 | Team Udayavani |

ಕಡಬ: ಕಡಬದ ಹೊಟೇಲೋಂದರಲ್ಲಿ ದೋಸೆ ಸ್ಪೆಷಲಿಸ್ಟ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೈಸೂರಿನ ಹಾರನಹಳ್ಳಿಯ ನಿವಾಸಿ ಶರತ್‌ ಬಾಬು (30) ಕಡಬದ ಹಲವರಿಗೆ ಲಕ್ಷಾಂತರ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.

Advertisement

ಕಡಬದಲ್ಲಿ ಪ್ರಾರಂಭವಾದ ಹೊಟೇಲ್‌ನ ದೋಸೆ ಮಾಡುವ ಕೆಲಸಕ್ಕೆ ಸೇರಿ ಎರಡು ತಿಂಗಳು ಆಗುವಷ್ಟರಲ್ಲೇ ತನ್ನ ಕುಕೃತ್ಯವನ್ನು ಎಸಗಿ ಪರಾರಿಯಾಗಿದ್ದಾನೆ. ಈ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.

ಏನೆಲ್ಲ ದೋಚಿದ್ದಾನೆಂದರೆ…

ಕಡಬದ ಎಲೆಕ್ಟ್ರಾನಿಕ್ಸ್‌ ಸಂಸ್ಥೆ ಯೊಂದರಿಂದ ಒಂದು ಲ್ಯಾಪ್‌ಟಾÂಪ್‌, ಕಲರ್‌ ಟಿವಿ, ಹೋಮ್‌ ಥಿಯೇಟರ್‌ ಹೀಗೆ ಒಟ್ಟು 45,000 ರೂ. ಮೌಲ್ಯದ ಸೊತ್ತುಗಳು, ಇನ್ನೊಂದು ಎಲೆಕ್ಟ್ರಾನಿಕ್ಸ್‌ ಸಂಸ್ಥೆಯಿಂದ 13,000 ರೂ.ನ ಸೊತ್ತುಗಳು, ಆತ ಕೆಲಸ ಮಾಡುತ್ತಿದ್ದ ಹೊಟೇಲ್‌ನ ಬಳಿ ಸರ್ವಿಸ್‌ ಸ್ಟೇಷನ್‌ ನಡೆಸುತ್ತಿರುವ ವ್ಯಕ್ತಿಯೊಬ್ಬರಿಂದ 6,500 ರೂ., ಇನ್ನೊಬ್ಬ ವ್ಯಕ್ತಿಯಿಂದ 2,000 ರೂ., ಕಡಬದ ತರಕಾರಿ ವ್ಯಾಪಾರಿಯೊಬ್ಬರಿಂದ 35,000 ರೂ., ದಿನಸಿ ವ್ಯಾಪಾಸ್ಥರೊಬ್ಬರಿಂದ 60,000 ರೂ., ಆತನೊಟ್ಟಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ 16,000 ರೂ., ವ್ಯಕ್ತಿಯೊಬ್ಬರಿಂದ ಚಿನ್ನದ ಸರ ಪಡೆದು, ಎಲೆಕ್ಟ್ರಾನಿಕ್ಸ್‌ ವಸ್ತುಗಳು ಹಾಗೂ ಇತರ ವಸ್ತುಗಳೊಂದಿಗೆ ಶರತ್‌ ಬಾಬು ನಾಪತ್ತೆಯಾಗಿದ್ದಾನೆ.

2 ಲಕ್ಷದ ಬೈಕು ಖರೀದಿ:

Advertisement

ತಾನು ಮೈಸೂರಿ ನಿಂದ ಬಿಳಿ ಅಕ್ಕಿ ತರಿಸಿ ಕೊಡುವುದಾಗಿ, ಕೆಲವರಿಗೆ ಉದ್ಯೋಗ ಕೊಡಿಸುವ ಆಮಿಷ ತೋರಿಸಿ, ಇನ್ನು ಕೆಲವರಿಗೆ ನಾಳೆ ಹಣ ವಾಪಾಸು ಮಾಡುವುದಾಗಿ, ಇನ್ನು ಕೆಲವರಿಗೆ ತಿಂಗಳ ಸಂಬಳವಾದಾಗ ಮರುಪಾವತಿಸುವುದಾಗಿ ಹೇಳಿ ಈ ಖತರ್‌ನಾಕ್‌ ಅಸಾಮಿ ಯಾಮಾರಿ ಸಿದ್ದಾನೆ. ಇಲ್ಲಿನ ಶೋ ರೂಮ್‌ ಒಂದರಿಂದ 45,000 ರೂ ಡೌನ್‌ ಪೇಮೆಂಟ್‌ ಮಾಡಿ ಎರಡು ಲಕ್ಷ ರೂ. ಮೌಲ್ಯದ ಬೈಕೊಂದನ್ನು ಖರೀದಿಸಿ ರಾತ್ರೋ ರಾತ್ರಿ ಕಡಬದಿಂದ ಕಾಲ್ಕಿತ್ತಿದ್ದಾನೆ. ಕಡಬದ ಮೊಬೈಲ್‌ ಶೋ ರೂಮ್‌ ಒಂದರಿಂದ 40,000 ರೂ. ಮೌಲ್ಯದ ಮೊಬೈಲ್‌ ಅನ್ನು ಸಾಲವಾಗಿ ಕೇಳಿ ವಿಫ‌ಲನಾಗಿದ್ದಾನೆ.

ಹೋಟೆಲ್‌ನ ಪಕ್ಕದಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಶರತ್‌ ಬಾಬು ಹೊಟೇಲ್‌ನಲ್ಲಿದ್ದುಕೊಂಡೆ ಇಲ್ಲಿನ ಹಲವು ಉದ್ಯಮಿಗಳ ವಿಶ್ವಾಸ ಸಂಪಾದಿಸಿ ದೋಖಾ ಎಸಗಿ ಮನೆಗೆ ಬೀಗ ಜಡಿದು ನಾಪತ್ತೆಯಾಗಿದ್ದಾನೆ. ಹಣ, ಸೊತ್ತುಗಳನ್ನು ಕಳೆದುಕೊಂಡ ಸಂತ್ರಸ್ತರು ಮೈಸೂರಿನ ಆತನ ಮನೆಗೆ ಹೋಗಿ ವಿಚಾರಿಸಿದ್ದಾರೆ. ಅಲ್ಲಿ ಆತ ಮನೆಗೆ ಬಾರದೆ ಒಂಬತ್ತು ವರ್ಷಗಳಾಗಿವೆ ಎಂದು ಆತನ ವೃದ್ಧ ತಂದೆ ನಿವೃತ್ತ ಶಿಕ್ಷಕ ಹೇಳಿದ್ದಾರೆ. ಆರೋಪಿಯು ತನ್ನ ಮೊಬೈಲ್‌ ಸಿಮ್‌ ಅನ್ನು ಕಡಬದಲ್ಲೇ ಬಿಸಾಕಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next