ಗದಗ: ಮೂರು ವರ್ಷದ ಹೆಣ್ಣು ಮಗುವನ್ನು ನದಿಗೆ ಎಸೆದು ಬಳಿಕ ತಾನೂ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಉಮಾ ಶೆಲ್ಲಿಕೇರಿ(40) ಮತ್ತು ಮಗಳು ಶ್ರೇಷ್ಠ ಶೆಲ್ಲಿಕೇರಿ(3) ನದಿಗೆ ಹಾರಿದ್ದಾರೆ. ಉಮಾ ತನ್ನ ಮೂವರು ಹೆಣ್ಣು ಮಕ್ಕ ಳೊಂದಿಗೆ ನದಿಗೆ ಹಾರಲು ತೆರಳಿದ್ದು, ಈ ವೇಳೆ ಇಬ್ಬರು ಹಿರಿಯ ಹೆಣ್ಣು ಮಕ್ಕಳು ಹೆದರಿ ಓಡಿ ಬಂದಿದ್ದಾರೆ. ತನ್ನೊಂದಿಗಿದ್ದ 3 ವರ್ಷದ ಶ್ರೇಷ್ಠಳನ್ನು ನದಿಗೆ ಹಾಕಿ, ಬಳಿಕ ತಾನೂ ನದಿಗೆ ಹಾರಿದ್ದಾಳೆ. ಈ ಕುರಿತು ಉಳಿದ ಇಬ್ಬರು ಮಕ್ಕಳು ಮನೆಗೆ ಸುದ್ದಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ: ಶಿರೂರು ಮಠಕ್ಕೆ ಅಪ್ರಾಪ್ತ ಪೀಠಾಧಿಪತಿ ನೇಮಕ ವಿವಾದ : ಹೈಕೋರ್ಟ್ ನಲ್ಲಿ ಅರ್ಜಿ ವಜಾ
ಅಗ್ನಿ ಶಾಮಕದಳದಿಂದ ರಕ್ಷಣಾ ಕಾರ್ಯ:
ಈ ಕುರಿತು ರೋಣ ಪೊಲೀಸ್ ಠಾಣೆ ಮೂಲಕ ಸುದ್ದಿತಿಳಿಯುತ್ತಿದ್ದಂತೆ ರೋಣ ಅಗ್ನಿ ಶಾಮಕ ದಳ ಅಧಿಕಾರಿ ಮಂಜುನಾಥ ಮೇಲ್ಮನಿ ನೇತೃತ್ವದಲ್ಲಿ 7 ಜನ ಅಗ್ನಿ ಶಾಮಕ ಸಿಬ್ಬಂದಿ ಬೆಳಗ್ಗೆ 6 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.