ಚಿಕ್ಕಬಳ್ಳಾಪುರ: ವೈಜ್ಞಾನಿಕವಾಗಿ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸಮಾಜದಲ್ಲಿ ಜನ ಜಾಗೃತಿ ಮೂಡಿಸಿದರು ಸಹ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಪಶಕುನವೆಂದು ಚಿಕ್ಕಪ್ಪನೊಬ್ಬ ತನ್ನ ಹಿರಿಯ ಸಹೋದರನ ಪುತ್ರಿಯನ್ನು ಚಾಕುವಿನಿಂದ ಗಂಟಲು ಸೀಳಿ ಕೊಲೆ ಮಾಡಿರುವ ಅಮಾನವೀಯ ಘಟನೆ ಅಂಗರೇಕನಹಳ್ಳಿಯಲ್ಲಿ ಸಂಭವಿಸಿದೆ.
ಅಂಗರೇಕನಹಳ್ಳಿಯ ಕೃಷ್ಣಮೂರ್ತಿಯ ಪುತ್ರಿ ಚಾರ್ವಿಕಾ(5) ಕೊಲೆಗೀಡಾದ ಬಾಲಕಿ, ಆರೋಪಿ ಶಂಕರ್ ತನ್ನ ಹಿರಿಯ ಸಹೋದರ ಕೃಷ್ಣಮೂರ್ತಿಯ ಪುತ್ರಿ ಚಾರ್ವಿಕಾ ಎಂಬಾಕೆಯ ಗಂಟಲು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕೊಲೆಗೀಡಾದ ಚಾರ್ವಿಕಾಳ ಹುಟ್ಟುತ್ತಾ ಬಲಗಾಲಿಗೆ ಅಂಗವೈಕಲತೆಯನ್ನು ಹೊಂದಿದ್ದು ಅಂಗವಿಕಲತೆಯನ್ನು ಹೊಂದಿರುವ ಚಾರ್ವಿಕಾ ಮನೆಯಲ್ಲಿದ್ದರೇ ದಾರಿದ್ರ್ಯವೆಂದು ಆಕೆ ಮನೆಯಲ್ಲಿ ಇರಬಾರದು ಸಾಯಿಸಿಬಿಡು ಎಂದು ಆರೋಪಿ ಶಂಕರ್ ಅಣ್ಣ ಕೃಷ್ಣಮೂರ್ತಿಯೊಂದಿಗೆ ತಗಾದೆ ತೆಗೆದು ಜಗಳ ಮಾಡಿಕೊಂಡು ಕಳೆದ ಮೂರು ವರ್ಷಗಳ ಹಿಂದೆಯೇ ಮನೆಯಿಂದ ಹೊರ ಹೋಗಿದ್ದಾನೆ ಆದರೆ ಕಳೆದ 5 ತಿಂಗಳಿಂದ ವಾಪಸ್ಸು ಮರಳಿದ ಶಂಕರ್ ಮನೆಯಲ್ಲಿ ಅಣ್ಣ ಮತ್ತು ಅತ್ತಿಗೆ ಇಲ್ಲದಿರುವುದನ್ನು ಗಮನಿಸಿ ಮನೆಯ ಮುಂದೆ ದೇವಸ್ಥಾನದ ಬಳಿ ಆಟವಾಡಿಕೊಂಡಿದ್ದ ಚಾರ್ವಿಕಾಳ ಗಂಟಲನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಸಂಬಂಧ ಕೊಲೆಗೀಡಾದ ಚಾರ್ವಿಕಾ ತಂದೆ ಕೃಷ್ಣಮೂರ್ತಿ ನೀಡಿದ ದೂರನ್ನು ಪೋಲಿಸರು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ರಚಿಸಿರುವ ಮೂರು ತಂಡಗಳು ಪರಾರಿಯಾಗಿರುವ ಆರೋಪಿ ಶಂಕರ್‍ನನ್ನು ಬಂಧಿಸಲು ಬಲೆ ಬೀಸಿದ್ದಾರೆ ಒಟ್ಟಾರೆ ಮೂಢನಂಬಿಕೆಯಿಂದ ಐದು ವರ್ಷದ ಚಾರ್ವಿಕಾ ಕೊಲೆಯಾಗಿರುವುದು ದುರಂತವೇ ಸರಿ.