Advertisement

ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು

12:49 AM Jan 25, 2021 | Team Udayavani |

ಚಿಕ್ಕಬಳ್ಳಾಪುರ: ಕೃಷಿ ಹೊಂಡಗೆ ಬಿದ್ದ ಮಕ್ಕಳನ್ನು ಆಸ್ಪತ್ರೆಗೆ ಕರೆದ್ಯೋಯಲು ಸಕಾಲಕ್ಕೆ ತುರ್ತು ವಾಹನ ಬಾರದೆ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೂಗಲಮರಿ ಗ್ರಾಮಸ್ಥರು ಆಕ್ರೋಶಗೊಂಡು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಿಟಕಿ ಗಾಜುಗಳನ್ನು ಜಖಂಗೊಳಿಸಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಮೂಗಲಮರಿ ಗ್ರಾಮದ ಶಿವರಾಜು ಎಂಬುವರ ಪುತ್ರ ಚರಣ್(10) ಮತ್ತು ರಾಮಾಂಜಿ ಎಂಬುವರ ಪುತ್ರ ತೇಜಸ್ (11) ಮೃತಪಟ್ಟ ನತದೃಷ್ಠರು.

ಮೂಗಲಮರಿ ಗ್ರಾಮದ ಚರಣ್ ಮತ್ತು ತೇಜಸ್ ಆಕಸ್ಮಿಕವಾಗಿ ಕಾಲು ಜಾರಿ ಕೃಷಿಹೊಂಡದಲ್ಲಿ ಬಿದ್ದು ಈಜು ಬಾರದೆ ನರಳುತ್ತಿದ್ದ ವೇಳೆ ಮನಗಂಡ ಪೋಷಕರು ಕೃಷಿ ಹೊಂಡದಿಂದ ಮೇಲೆತ್ತಿ ಆ್ಯಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದ್ದಾರೆ ಆದರೆ ಕರೆ ಮಾಡಿ ಎಷ್ಟೋತಾದರೂ 108 ವಾಹನ ಬಂದಿಲ್ಲ ಎನ್ನಲಾಗಿದೆ ಇದರಿಂದ ದಿಕ್ಕುತೋಚದ ಗ್ರಾಮಸ್ಥರು 407 ಟೆಂಪೋ ವಾಹನದಲ್ಲಿ ಮಕ್ಕಳನ್ನು ಆಸ್ಪತ್ರೆಗೆ ಕರೆದ್ಯೋಯುತ್ತಿದ್ದ ವೇಳೆ ಟೆಂಪೋ ಮಾರ್ಗಮಧ್ಯೆ ಕೆಟ್ಟು ನಿಂತ ಪರಿಣಾಮ ಮಕ್ಕಳು ಆಸ್ಪತ್ರೆಗೆ ಸೇರುವ ಕ್ಷಣದಲ್ಲೆ ಮೃತಪಟ್ಟಿದ್ದಾರೆ ಇದರಿಂದ ಆಕ್ರೋಶಗೊಂಡ ಗ್ರಾಮದ ಯುವಕರು ಚಿಂತಾಮಣಿ ತಾಲೂಕಿನಲ್ಲಿ ತುರ್ತು ಸಂದರ್ಭದಲ್ಲಿ ಸೇವೆ ಲಭಿಸಿಲ್ಲವೆಂದರೆ ಆಸ್ಪತ್ರೆಗಳು ಯಾಕೆ ಇರಬೇಕು ಎಂದು ಕಿಟಕಿ ಗಾಜುಗಳನ್ನು ಹೊಡೆದು ದಾಂಧಲೆ ನಡೆಸಿದ್ದಾರೆ.

ಸಾರ್ವಜನಿಕರು ಸಂಕಷ್ಟದಲ್ಲಿ ಸಿಲುಕುವಾಗ ಅಥವಾ ರಸ್ತೆ ಅಪಘಾತಗಳು ಸಂಭವಿಸಿದಾಗ ತುರ್ತುಸೇವೆಗೆಂದು ಇರುವ 108 ವಾಹನ ಬಾರದಿರುವ ಹಿನ್ನೆಲೆಯಲ್ಲಿ ಚಿಂತಾಮಣಿ ತಾಲೂಕಿನಲ್ಲಿ ಇಬ್ಬರು ಮಕ್ಕಳಿಗೆ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದಾರೆ ಎಂದು ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಕಾಲದಲ್ಲಿ ತುರ್ತು ವಾಹನಗಳು ಬಂದಿದ್ದರೇ ತಮ್ಮ ಮಕ್ಕಳ ಪ್ರಾಣ ಉಳಿಯುತ್ತಿತ್ತು ಎಂದು ಪೋಷಕರು ನೊಂದು ತಮ್ಮ ನೋವು ವ್ಯಕ್ತಪಡಿಸಿದ್ದಾರೆ ಮತ್ತೊಂದಡೆ ಯುವಕರ ಗುಂಪು ಆಕ್ರೋಶಗೊಂಡು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ಜಖಂಗೊಳಿಸಿದ್ದಾರೆ.

ಸಿಸಿ ಕ್ಯಾಮರಾ ನಿಷ್ಕ್ರೀಯ:  ಇನ್ನು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ ಯುವಕರನ್ನು ಪತ್ತೆ ಹಚ್ಚಲು ಪೋಲೀಸರು ಆಸ್ಪತ್ರೆಯ ಸಿಸಿ ಕ್ಯಾಮೆರಗಳನ್ನು ಪರಿಶೀಲಿಸಿದಾಗ ಆಸ್ಪತ್ರೆಯ ಸಿಸಿ ಕ್ಯಾಮೆರಗಳು ಕೆಟ್ಟು ನಿಂತು ತಿಂಗಳುಗಳೆ ಕಳೆದಿರುವುದು ಬಹಿರಂಗವಾಗಿದೆ ಈ ವೇಳೆ ಕರ್ತವ್ಯದಲ್ಲಿದ್ದ ವೈದ್ಯ ವಾಣಿ ಮಾತನಾಡಿ ಕೃಷಿ ಹೊಂಡದಲ್ಲಿ ಬಿದಿದ್ದ ಮಕ್ಕಳನ್ನು ಬಂದ ತಕ್ಷಣ ತಪಾಸಣೆ ಮಾಡಿದ್ದೇವೆ ಆದರೆ ಅವರು ಆಷ್ಟೋತ್ತಿಗೆ ಮೃತಪಟ್ಟಿದ್ದರು ಅದನ್ನು ಗಮನಿಸದ ಗ್ರಾಮಸ್ಥರು ಆ್ಯಂಬುಲೆನ್ಸ್ ಬರಲಿಲ್ಲವೆಂದು ಹಾಗೂ ವೈದ್ಯರು ಚಿಕಿತ್ಸೆ ನೀಡಿಲ್ಲವೆಂದು ದೂರಿ ವೈದ್ಯರನ್ನು ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಧಂದಾಲೆ ನಡೆಸಿದ್ದಾರೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ವೈದ್ಯರಿಗೆ ಭದ್ರತೆಯನ್ನು ಒದಗಿಸಬೇಕಾಗಿದೆ ಎಂದರು.

Advertisement

ವಿಷಯ ತಿಳಿದ ಕೂಡಲೇ ನಗರ ಪೋಲೀಸ್ ಠಾಣೆಯ ಪೋಲಿಸರು ಸಾರ್ವಜನಿಕ ಆಸ್ಪತ್ರೆಗೆ ಬಂದು ಪರಿಶೀಲಿಸಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿರುವ ವ್ಯಕ್ತಿಗಳ ವಿರುಧ್ಧ ಕ್ರಮ ಜರುಗಿಸಲು ಮುಂದಾಗಿದ್ದಾರೆ.

 

ಇದನ್ನೂ ಓದಿ : ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ

Advertisement

Udayavani is now on Telegram. Click here to join our channel and stay updated with the latest news.

Next