Advertisement

ಹಾಸಿಗೆ ಭರ್ತಿಯಾದ ವೆಂದು ಕೋವಿಡ್‌ ರೋಗಿಗಳನ್ನೇ ಕೊಲೆಗೈದ ವೈದ್ಯ?

01:18 AM Jan 28, 2021 | Team Udayavani |

ಬ್ರೆಸ್ಕಿಯಾ: ಬೆಡ್‌ಗಳನ್ನು ಖಾಲಿಮಾಡಿಸುವುದಕ್ಕಾಗಿ ಇಬ್ಬರು ರೋಗಿಗಳನ್ನು ಕೊಂದ ಆರೋಪ ಸಂಬಂಧ ಇಟಲಿಯ ಮೊಂಟಿಚಿಯಾರಿ ಆಸ್ಪತ್ರೆಯ ವೈದ್ಯ ಡಾ| ಕಾರ್ಲೋ ಮೋಸ್ಕಾರನ್ನು ಬಂಧಿಸಲಾಗಿದೆ.

Advertisement

ಈ ಪ್ರದೇಶವು ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲಿ ಅತೀ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾಗಿತ್ತು. ದಿನಕ್ಕೆ 800ಕ್ಕೂ ಅಧಿಕ ಜನ ಸಾವನ್ನಪ್ಪುತ್ತಿದ್ದರು. ಅಲ್ಲಿನ ಆಸ್ಪತ್ರೆಗಳೆಲ್ಲ ತೀವ್ರವಾಗಿ ಬೆಡ್‌ನ‌ ಕೊರತೆಎದುರಿಸುತ್ತಿದ್ದವು. ಇಂಥ ಸಮಯದಲ್ಲೇ ಇಬ್ಬರು ಸೋಂಕಿತರಿಗೆ ಡಾ| ಕಾರ್ಲೋ ಅವರು ಅನಸ್ತೇಶಿಯಾ ಮತ್ತು ವಿವಿಧ ಔಷಧಗಳನ್ನು ಕೊಟ್ಟು ಸಾಯಿಸಿದ್ದರು ಎನ್ನಲಾಗುತ್ತದೆ. ಬೆಡ್‌ಗಳ ತೀವ್ರ ಅಭಾವ ಎದುರಾದಾಗ ಅನ್ಯ ರೋಗಿಗಳಿಗೆ ಜಾಗ ಸಿಗಬೇಕೆಂದು ಅವರು ಹೀಗೆ ಮಾಡಿದ್ದಾರೆ. ಆತ ಹುಚ್ಚ, ಬೆಡ್‌ ಖಾಲಿ ಮಾಡಲು ರೋಗಿಗಳನ್ನು ಸಾಯಿಸುತ್ತಿದ್ದಾನೆ ಎಂಬ ಅನಾಮಿಕ ಸಂದೇಶ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಈಗ ಅತನ‌ನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next